ಗರಿಷ್ಠ ಲಸಿಕೆ ಉತ್ಪಾದನೆಗಾಗಿ ಭಾರತ ಸರಕಾರಕ್ಕೆ​ ಪುತ್ತಿಗೆ ಶ್ರೀಗಳ ಮನವಿ

ಇಂದು ಬೆಳಿಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾದಂತಹ ಡಾ. ಟೆಡ್ರೋಸ್ ಅಧನೋಮ್ ಗೇಬ್ರಿಯೇಸಸ್ ((Dr Tedros Adhanom Ghebreyesus) ) ಅವರ ನೇತೃತ್ವದಲ್ಲಿ ಕೋವಿಡ್ ಬಗ್ಗೆ ನಡೆದ ಜಾಗತಿಕ ನಾಯಕರ ವರ್ಚುವಲ್ ತುರ್ತು ಸಭೆಯಲ್ಲಿ ಭಾಗವಹಿಸಿದ ನಂತರ ಸಭೆಯ ಆಶಯದಂತೆ ಶ್ರೀಪುತ್ತಿಗೆ ಶ್ರೀಗಳು ಗರಿಷ್ಠ ಲಸಿಕೆ ಉತ್ಪಾದನೆಯ ಬಗ್ಗೆ ಭಾರತ ಸರಕಾರವನ್ನು ವಿನಂತಿಸಿದರು.

ಸಭೆಯಲ್ಲಿ ಪ್ರಸ್ತಾವಿತವಾದ ಅಭಿಪ್ರಾಯದಂತೆ ಕೋವಿಡ್ ದ್ವಿತೀಯ ಅಲೆಯು ವಾಸ್ತವಿಕವಾಗಿ ಕಳೆದ ಬಾರಿಗಿಂತಲೂ ತೀವ್ರತರ ಹಾಗೂ ಕ್ಷಿಪ್ರಕರವಾಗಿದ್ದು, ಜನರ ಆತಂಕವನ್ನು ತಡೆಯಲು ಫ್ರಾನ್ಸ್, ಇಟಲಿ ಮೊದಲಾದ ದೇಶಗಳು ಸಂತ್ರಸ್ತರ ವಾಸ್ತವ ಸಂಖ್ಯೆಗಳನ್ನು ಪ್ರಕಟಿಸದೇ ಇದ್ದು ಇದಕ್ಕೆ ಡಿಸೆಂಬರ್ ಜನವರಿ-ತಿಂಗಳುಗಳಲ್ಲಿ ಜನತೆಯ ​ನಿರ್ಲಕ್ಸ್ಯವೇ ಮುಖ್ಯ ಕಾರಣ ಎಂದು ತಿಳಿದುಬಂದಿದೆ.

ಈ ಬಾರಿಯ ಸಮಸ್ಯೆಯನ್ನು ಎದುರಿಸಲು ತೊಡಕಾಗಿರುವುದು ಅನೇಕ ದೇಶಗಳಿಗೆ ಲಸಿಕೆಯು ಅಲಭ್ಯವಾಗಿರುವುದು ಮುಖ್ಯ ಕಾರಣವಾಗಿರುತ್ತದೆ. ಅಲ್ಲದೆ ಕಳೆದ ಬಾರಿ ಕರೋನ ಪರಿಚಿತವಾದ್ದರಿಂದ ಜನತೆ ಕರೋನವನ್ನು ಎದುರಿಸು ವುದು ಕಷ್ಟಕರವಲ್ಲ ಎಂದು ಭಾವಿಸಿದ್ದೂ ಕೂಡ ಮುಖ್ಯ ಕಾರಣವಾಗಿರುತ್ತದೆ.

ಆದರೆ ಈ ಬಾರಿಯ ಕರೋನ ವಿಲಕ್ಷಣ ಸ್ವರೂಪದ್ದಾಗಿದ್ದು, ಕಳೆದ ಬಾರಿಯ ಕರೋನಕ್ಕಿಂತ ವಿಭಿನ್ನವಾಗಿದೆ ಎಂಬುದನ್ನು ಜನತೆ ಗುರುತಿಸಬೇಕೆಂದು ಸಭೆಯು ಅಭಿಪ್ರಾಯಪಟ್ಟಿದೆ. ಈ ಬಾರಿ ಜಗತ್ತಿನ ಅನೇಕ ದೇಶಗಳು ಲಸಿಕೆಗಾಗಿ ಭಾರತದತ್ತ ಮುಖಮಾಡಿದ್ದು, ಈ ನಿಟ್ಟಿನಲ್ಲಿ ಭಾರತವು ಗರಿಷ್ಠ ಲಸಿಕೆಯ ಉತ್ಪಾದನೆಯನ್ನು ಮಾಡಬೇಕಾಗಿ ಸಭೆಯ ಪರವಾಗಿ ಉಡುಪಿ ಶ್ರೀಪುತ್ತಿಗೆ ಶ್ರೀಗಳು ಭಾರತ ಸರಕಾರವನ್ನು ಮನವಿ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply