ಕೃಷಿ ವಲಯದಲ್ಲಿ ಸ್ವಂತ ಮನೆ ಕಟ್ಟಲು ಅವಕಾಶ ಮಾಡಿಕೊಡಲು ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್ ಅಧಿವೇಶನದಲ್ಲಿ ಆಗ್ರಹ.~ ಕೆ.ರಾಘವೇಂದ್ರ ಕಿಣಿ ಅಭಿನಂದನೆ

ಕೃಷಿ ವಲಯದಲ್ಲಿ ಸ್ವಂತ ಮನೆ ಕಟ್ಟಲು ಅವಕಾಶ ಮಾಡಿಕೊಡಲು ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್ ಅಧಿವೇಶನದಲ್ಲಿ ಆಗ್ರಹ. ಇಂದು ವಿಧಾನಸಭಾ ಅಧಿವೇಶನದಲ್ಲಿ ಉಡುಪಿ ಕ್ಷೇತ್ರದ ಶಾಸಕ ಕೆ.ರಘುಪತಿ ಭಟ್ ಕೃಷಿ ವಲಯದಲ್ಲಿ ಕನ್ವರ್ಷನ್ ಸಮಸ್ಯೆ, ಮನೆ ಕಟ್ಟಲು ಅವಕಾಶ ನಿರಾಕರಣೆ ಬಗ್ಗೆ ಸರ್ಕಾರದ ತೀವ್ರ ಗಮನ ಸೆಳೆದರು.

15 ದಿವಸದ ಒಳಗಾಗಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ, ಮಂಗಳೂರು ಪ್ರಾಧಿಕಾರ ದಲ್ಲಿರುವಂತೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಯೂ ಕನ್ವರ್ಷನ್ ಮತ್ತು ಮನೆ ಕಟ್ಟಲು ಅವಕಾಶ ನೀಡುವುದಾಗಿ ಸರ್ಕಾರದ ಪರವಾಗಿ ಸಚಿವ ಶಿವರಾಮ ಹೆಬ್ಬಾರ್ ಉತ್ತರ ನೀಡಿರುತ್ತಾರೆ.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ 2000 ಗಿಂತಲೂ ಹೆಚ್ಚಿನ ಜನ ತಮ್ಮ ಸ್ವಂತ ಜಾಗದಲ್ಲಿ 10 ಸೆಂಟ್ಸ ಜಾಗದಲ್ಲಿ ವರೆಗೆ ಕನ್ವರ್ಷನ್ ಆಗದೆ , ವಲಯ ಬದಲಾವಣೆ ಆಗದೆ ತಮ್ಮ ಸ್ವಂತ ಮನೆ ಕಟ್ಟಲು ಆಗದೆ ಕಷ್ಟಪಡುತ್ತಿದ್ದಾರೆ. ಬಂಟ್ವಾಳ ಪ್ರಾಧಿಕಾರ ಮತ್ತು ಮಂಗಳೂರು ಪ್ರಾಧಿಕಾರದಲ್ಲಿ 5 ಸೆಂಟ್ಸು ನಷ್ಟು ಕನ್ವರ್ಷನ್ ಮತ್ತು ಮನೆ ಕಟ್ಟಲು ಅವಕಾಶವಿದೆ.

ಕಳೆದ ನಾಲ್ಕು ವರ್ಷಗಳಿಂದ ಬಾಕಿ ಇದ್ದ ಈ ವಿಷಯವನ್ನು ಕ್ಷೇತ್ರದ ಶಾಸಕ ಕೆ ರಘುಪತಿ ಭಟ್ ಬೆನ್ನು ಹಿಡಿದು, ಛಲ ದಿಂದ ಮಾಡಿದ ಜನಪರ ಹೋರಾಟಕ್ಕೆ , ಹಿಡಿದ ಕೆಲಸವನ್ನು ಗುರಿ ಮುಟ್ಟಿಸುವ ಮಾನ್ಯ ಶಾಸಕರಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಅಭಿನಂದನೆ ಸಲ್ಲಿಸಿರುತ್ತಾರೆ. ಆದಷ್ಟು ಶೀಘ್ರ ಸರಕಾರ ಈ ಆದೇಶ ಮಾಡಿದಾಗ ಸಾಮಾನ್ಯ ಮತ್ತು ಮಧ್ಯಮ ವರ್ಗದವರ ತಮ್ಮ ಸ್ವಂತ ಸೂರು ಕಟ್ಟುವ ಕನಸು ನನಸಾಗಲಿದೆ.

 
 
 
 
 
 
 
 
 
 
 

Leave a Reply