ಲಯನ್ಸ್ ಕ್ಲಬ್ ಬ್ರಹ್ಮಗಿರಿ ವತಿಯಿಂದ ಕಾರ್ಗಿಲ್ ದಿನದ ಆಚರಣೆ, ಕೊಡೆ ವಿತರಣೆ

ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅವರಿಂದ ಕಾರ್ಗಿಲ್ ದಿನದ ಆಚರಣೆ.  ನಿಜವಾದ ಭಾರತೀಯನಿಗೆ ಈ ದಿನ ಮರೆಯಲು ಸಾಧ್ಯವಿಲ್ಲ, ದೇಶದ ಭದ್ರತೆ, ಅಖಂಡತೆ ಹಾಗೂ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವಲ್ಲಿ ನಮ್ಮ ಯೋಧರು ತೋರಿದ ತ್ಯಾಗ ಬಲಿದಾನವನ್ನು ರಾಷ್ಟ್ರದ ಜನತೆ ಎಂದಿಗೂ ಮರೆಯಲಾಗದು. 

1999ರಲ್ಲಿ ನಡೆದ ಯುದ್ಧವೇ ಕಾರ್ಗಿಲ್ ಯುದ್ಧ, ಕಾರ್ಗಿಲ್ ಯುದ್ಧದ ವಿಜಯ ದಿವಸವೇ ಜುಲೈ 26ರಂದು ಆಚರಿಸಲಾಗುತ್ತದೆ ಎಂದು ಲಯನ್ಸ್ ಕ್ಲಬ್ ಬ್ರಹ್ಮಗಿರಿಯವರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಸ್ವೀಕರಿಸಿ ಕೆ ಸುರೇಶ್ ರಾವ್, ಬಿಎಸ್ಎಫ್ ನಿವೃತ್ತ ಸೇನಾಧಿಕಾರಿಯವರು ಕಾಡುಬೆಟ್ಟಿನಲ್ಲಿರುವ ಟಿ ಏ ಪೈ ಮೊಡರ್ನ ಪ್ರಾಥಮಿಕ ಹಿರಿಯ ಶಾಲೆಯಲ್ಲಿ ನೆರೆದ ಎಲ್ಲಾ ಲಯನ್  ಸದಸ್ಯರನ್ನು, ಶಾಲಾ ಮಕ್ಕಳನ್ನು, ಅಧ್ಯಾಪಕ ವೃಂದ ದವರನ್ನು, ವ್ಯವಸ್ಥಾಪಕ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. 

 
ಸಮಿತಿಯ ರಮೇಶ್ ರಾವ್ ಸ್ವಾಗತಿಸಿದರೆ, ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಶ್ರೀ ಎಚ್ಆರ್ ಶೆಣೈಅವರು ಸಭೆಯನ್ನು ಉದ್ದೇಶಿಸಿ ಲಯನ್ಸ್ ಕ್ಲಬ್ಬಿನ ಸೇವೆಯನ್ನು ಶ್ಲಾಘಿಸಿದರು.  ಶಾಲೆಯ ಮಕ್ಕಳಿಗೆ ಲಯನ್ಸ್  ಕ್ಲಬ್ ಬ್ರಹ್ಮಗಿರಿಯಿಂದ ಕೊಡೆಯನ್ನು ವಿತರಿಸುವ ಕಾರ್ಯಕ್ರಮವನ್ನು ನಡೆಸಲಾಯಿತು. ಪ್ರಾಂತ್ಯ ಅಧ್ಯಕ್ಷರಾದ ಲಯನ್ ಹರಿಪ್ರಸಾದ್ ರೈ, ಜಿಲ್ಲಾ ಡೈರೆಕ್ಟರಿಯ ಪ್ರಮುಖ ಸಂಪಾದಕರಾದ ಲಯನ್ಸ್ ಸಪ್ನಾ ಸುರೇಶ್, ಜಿಲ್ಲಾ ಕಾರ್ಡಿನೇಟರ್ ಲಯನ ವಾದಿರಾಜರಾವ್, ಬ್ರಹ್ಮಗಿರಿಯ ಅಧ್ಯಕ್ಷರಾದ ಲಯನ್ ಉಮೇಶ್ ನಾಯಕ್ ಹಾಗೂ ಕ್ಲಬ್ಬಿನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು ಪ್ರತಿಭಾವಂತ ವಿದ್ಯಾರ್ಥಿನಿ ಅಂಕಿತಾ ಅವರಿಗೆ ಕ್ಲಬ್ಬಿನ ಪರವಾಗಿ ಧನ ಸಹಾಯ ಹಸ್ತಾಂತರಿಸಲಾಯಿತು. 
 
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಾರಾಯಣ ಬಂಡಾರಿ ಅವರು ಧನ್ಯವಾದ ಕಾರ್ಯಕ್ರಮ ನೆರವೇರಿಸಿದರು. ಶಿಕ್ಷಕಿಯರಾದ ಸೌದಾಮಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಮಕ್ಕಳಿಗೆ ಲೈನ್ಸ್ ಕ್ಲಬ್ ನ ಪರವಾಗಿ ಸಿಹಿ ಹಂಚುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
 
 
 
 
 
 
 
 
 
 
 

Leave a Reply