ಸನಾತನ ಸಂಸ್ಕಾರ ಶಿಬಿರ ಸಂಪನ್ನ

🕉️ಸನಾತನ ಸಂಸ್ಕಾರ ಶಿಬಿರ

ಟಿವಿ, ಮೊಬೈಲ್ ಹಾವಳಿಯ ಮಧ್ಯೆ ಮಕ್ಕಳ ಬೇಸಿಗೆ ರಜೆಯಲ್ಲಿಸನಾತನ ಸಂಸ್ಕಾರದ ಹಾಗೂ RSSನ ರಾಷ್ಟ್ರಪ್ರೇಮ ವಿಷಯ ಗಳನ್ನೊಳಗೊಂಡ ಶಿಬಿರವನ್ನು ಯಾರಾದರೂ ಆಯೋಜಿಸಬಾರದೇಕೆ ಎಂದು ತಂದೆ ಬಾಲಾಜಿ ರಾಘವೇಂದ್ರ ಆಚಾರ್ಯರಲ್ಲಿ ಹೀಗೆ ಪ್ರಾಸಂಗಿಕವಾಗಿ ಪ್ರಶ್ನಿಸಿದಾಗ ನೀನೇ ಮಾಡಬಾರದೇಕೆ ಎಂಬ ಮರುಪ್ರಶ್ನೆಗೆ ಒಮ್ಮೆ ತಬ್ಬಿಬ್ಬಾದೆ.

ಬೇಕಾದ ಮಾರ್ಗದರ್ಶನ ನೀಡುತ್ತೇನೆಂದಾಗ ಮಾಡಲೇಬೇಕೆಂಬ ಛಲ ಮೂಡಿತು.

ಸಂಸ್ಕಾರದ ಮುಖ್ಯಭಾಗವಾದ ಭಗವದ್ಗೀತೆ, ಭಜನೆ,ಕೃಷ್ಣನ ಬಾಲಲೀಲೆಯ ಕಥೆಗಳು ,ಯೋಗ,ಶಿಸ್ತಿನ ಜೊತೆ ದೇಶಪ್ರೇಮ ಹಾಗೂ ಪ್ರಸ್ತುತ ಸಮಯದ ಅವಶ್ಯಕತೆಗೆ ಅನಿವಾರ್ಯ ವಾಗಿ ದೇಶ, ಧರ್ಮದ ಉಳಿವಿಗೆ ಮಕ್ಕಳಿಗೆ ಹೇಳಲೇಬೇಕಾದ ಕೆಲವು ನಿಷ್ಠುರ ಸತ್ಯಗಳನ್ನೂ ಶಿಬಿರದ ಪಠ್ಯದಲ್ಲಿ ಸೇರಿಸಲಾಯಿತು.

ವಾಟ್ಸಾಪ್ ನಲ್ಲಿ ಶಿಬಿರದ ನೋಂದಣಿಗೆ ವಿಷಯ ಹರಿಯಬಿಟ್ಟಾಗ ಜಾಗೃತ ಹಿಂದೂ ಸಮಾಜದ ಪೋಷಕರ 2೦೦ಕ್ಕೂ ಮಿಕ್ಕಿ ಕರೆಗಳು ನಮಗೆ ಪುಷ್ಟಿ ನೀಡಿತು.

ಸ್ಥಳಾವಕಾಶ ಹಾಗೂ ನನ್ನ ಅನುಭವದ ಕೊರತೆಯಿಂದಾಗಿ ಕೇವಲ 50 ಮಕ್ಕಳಿಗೆ ಸೀಮಿತಗೊಳಿಸಿದೆ. ಧರ್ಮಾಧಾರಿತ ಶಿಬಿರವಾದ್ದರಿಂದ ಮಕ್ಕಳಿಗೆ ಉಚಿತವಾಗಲಿ ಎಂದ ತಂದೆಯವರು ಪ್ರಾಯೋಜಕತ್ವವನ್ನು ನಾವೇ ಮಾಡೋಣ ಎಂದರು.

ರಾಮನವಮಿಯಂದು ಕಡಿಯಾಳಿ ಶಾಲೆಯ ಹಾಲ್ ನಲ್ಲಿ ಯುವ ಉದ್ಯಮಿ ಅಜಯ್ ಶೆಟ್ಟಿ ಹಾಗೂ ನಗರ ಸಂಘಚಾಲಕರಾದ ಮಟ್ಟುಲಕ್ಷ್ಮೀನಾರಾಯಣ್ ರಾವ್ ದೀಪ ಹಚ್ಚಿಶಿಬಿರಕ್ಕೆ ಶುಭ ಕೋರಿದರು.

ಮೊದಲೆರಡು ದಿನ ಮನಸ್ಸಿನಲ್ಲಿ ದುಗುಡ ವಿತ್ತು.ಜಿಹಾದಿ ಭಯೋತ್ಪಾದಕರ ಕ್ರೌರ್ಯದ ಬಗೆಗಿನ ಕಠಿಣ ಸತ್ಯಗಳನ್ನುಮಕ್ಕಳಿಗೆ ಹೇಳಿದಾಗ ಪೋಷಕರಾದ ನಿಮ್ಮ ಅಚಲ ಬೆಂಬಲ ನನ್ನಉತ್ಸಾಹವನ್ನು ಇನ್ನೂ ಹೆಚ್ಚಿಸಿತು.

ಶಿಬಿರದ ಜೀವಾಳವಾದ ಮಕ್ಕಳ ಉತ್ಸಾಹ ದಿನದಿಂದ ದಿನಕ್ಕೆ ಅಧಿಕವಾಗಿದ್ದಂತೂ ಶಕ್ತಿಇಮ್ಮಡಿಗೊಳಿಸುವಂತೆ ಮಾಡಿತು. ಚೀನಾದ ವಸ್ತುಗಳ ಬಹಿಷ್ಕಾರ, ಗೋಮಾಂಸ ಯಾಕೆ ವರ್ಜ್ಯ, ಮುಘಲರಿಗೆ ಸಿಂಹಸ್ವಪ್ನ ವಾಗಿದ್ದ ಶಿವಾಜಿಯು ಜಿಹಾದಿ ಆಫ್ಝಲ್ ಖಾನ್ ನನ್ನುಮುಗಿಸಿದ ಕಥೆ, ಇಸ್ಲಾಂನ ಮತಾಂಧರ ಕೈಗೆ ಸಿಕ್ಕಿ 4೦೦೦೦ಕ್ಕೂ ಅಧಿಕ ಮಂದಿರ ಪುಡಿ ಆದ ಕಥೆ, ಸ್ವಾಭಿಮಾನದ ಪ್ರತೀಕವಾಗಿ ರಾಮ ಮಂದಿರ ಪುನಃ ತಲೆ ಎತ್ತಿದ ಕಥೆಗಳನ್ನು ಕೇಳಿದ ಮಕ್ಕಳ ಪ್ರತಿಕ್ರಿಯೆ ಮನಮುಟ್ಟುವಂತಿತ್ತು.

ಅದರೊಂದಿಗೆ ಉಡುಪಿ ಕೃಷ್ಣನ ಪ್ರತಿಷ್ಠೆಯ ಬಗೆ, ರಾಮಾಯಣ, ಮಹಾಭಾರತದ ಕಥೆಗಳು, ಆಹಾರದ ಮಹತ್ವ ತಿಳಿಯಲು ಮಕ್ಕಳೇ ಗಿಡ ನೆಟ್ಟು ಬೆಳೆಸಿ ಪುಟಾಣಿ ರೈತರೆನಿಸಿದ್ದು,  ಸುರಕ್ಷತೆ ಬಗ್ಗೆತಿಳಿದದ್ದು, ಎಲೆಕ್ಷನ್ ಬಗ್ಗೆ ಮಕ್ಕಳಿಗೆ ತಿಳಿಸಿ ಮಾಡೆಲ್ ಎಲೆಕ್ಷನ್ ನಲ್ಲಿ ಮಕ್ಕಳು ಮತ ಚಲಾಯಿಸಿ ದ್ದೆಲ್ಲಾ ಶಿಬಿರದ ಇತರ ಸಿಹಿ ನೆನಪುಗಳು.

ಶಿಬಿರದ ಕೊನೆ ದಿನ..  ಮಕ್ಕಳಿಗೆ ಏನನ್ನು ನೀಡಬೇಕೆಂದು ಅನಿಸಿತ್ತೋ ಅದನ್ನು ಯಥಾಶಕ್ತಿ ನೀಡಿದ ತೃಪ್ತಿ ಇದೆ. ದೇವರು ನನ್ನನ್ನು ಬರಿಯ ನಿಮಿತ್ತವಾಗಿಸಿ ಈ ಶಿಬಿರವನ್ನು ಮಾಡಿಸಿದ ವಿನಮ್ರ ಭಾವ ಮನಸ್ಸಿನಲ್ಲಿ ಆವರಿಸಿದೆ.

ಶಿಬಿರಕ್ಕೆ ಸ್ಥಳಾವಕಾಶ ನೀಡಿ, ಭೇಟಿ ನೀಡಿ ಅನುಗ್ರಹಿಸಿದ ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರಿಗೆ ಪ್ರಣಾಮಪೂರ್ವಕ ವಂದನೆಗಳು. ತಮ್ಮ ಕೆಲಸದ ಮಧ್ಯೆಯೂ ಬಂದು ಭಗವದ್ಗೀತೆ,ಸಂಕೀರ್ತನೆಯನ್ನು ನಿಶ್ಶುಲ್ಕವಾಗಿ ಕಲಿಸಿದ ನಿಖಿತಾ ಪೆಜತ್ತಾಯ ಹಾಗೂ ವಿದ್ಯಾರ್ಥಿಯಾಗಿಯೂ ಬಿಡುವಿನಲ್ಲಿ ಬಂದು ಕೃಷ್ಣಕಥೆ ಹೇಳಿದ ಗುರುರಾಜ್ ಭಟ್ಅವರ ಸೇವೆ ಶ್ಲಾಘನೀಯ.

ಆರ್ ಎಸ್ ಎಸ್ ನ ಸಾತ್ವಿಕ್ ತಂಡ ಸೂರ್ಯನಮಸ್ಕಾರ, ಮಾತೃಭೂಮಿ ಪ್ರಾರ್ಥನೆ, ದೇಸಿ ಆಟಗಳನ್ನು ಮಕ್ಕಳಿಗೆ ಕಲಿಸಿಕೊಟ್ಟದ್ದನ್ನು ನೆನಪಿಸುತ್ತೇನೆ. ಕಡಿಯಾಳಿ ಶಾಲೆಯ ಆಡಳಿತಾಧಿಕಾರಿ ಪ್ರಭಾವತಿ ಅಡಿಗ, ಮುಖ್ಯ ಶಿಕ್ಷಕಿ ಪೂರ್ಣಿಮಾ, ಶಾಲೆಯ ಎಲ್ಲ ಸಿಬ್ಬಂದಿವರ್ಗ ತಮ್ಮ ಸಮಯವನ್ನು ನೀಡಿ ಮಾಡಿದ ಸಹಕಾರ ಮರೆಯುವಂತಿಲ್ಲ.

ಶಿಬಿರದ ಕೊನೆಯ ದಿನ ಕೆಲವು ಪೋಷಕರು ಎಲ್ಲ ಮಕ್ಕಳಿಗೆ ಗಿಫ್ಟ್ಸ್ ನೀಡಿದ್ದು ಮಕ್ಕಳ ಸಂತಸ ಇಮ್ಮಡಿಯಾಗಿದೆ. ತಮ್ಮ ಮಕ್ಕಳನ್ನು ಕಳುಹಿಸಿ ನಮ್ಮನ್ನು ಪ್ರೋತ್ಸಾಹಿಸಿದ ಎಲ್ಲ ಪೋಷಕರಿಗೆ ನಮನಗಳು.

ಇಂತಹ ಶಿಬಿರ ಇಲ್ಲಿಗೆ ನಿಲ್ಲದೆ ಇನ್ನೂ ಹೆಚ್ಚು ಮಕ್ಕಳನ್ನೊಳಗೊಂಡು ಪ್ರತಿ ವರ್ಷ ಮುಂದುವರಿಸಬೇಕೆಂಬ ನಿಮ್ಮೆಲ್ಲರ ಒತ್ತಾಯಕ್ಕೆ ಭಗವಂತ ನಮಗೆ ಶಕ್ತಿ ನೀಡಲಿ, ದೇಶದ ಹಳ್ಳಿ ಹಳ್ಳಿಗಳಲ್ಲಿ ಇಂತಹ ಧರ್ಮ, ದೇಶಭಕ್ತಿಯ ಜಾಗೃತಿ ಮೂಡಿಸುವ ಶಿಬಿರಗಳು ನಡೆಯಲಿ ಎಂದು ಪ್ರಾರ್ಥಿಸಿ ವಿರಮಿಸುವೆ.

 
 
 
 
 
 
 
 
 
 
 

Leave a Reply