ಚಿಕ್ಕ ಮಕ್ಕಳಿಂದ ಚೊಕ್ಕ ಗ್ರಾಮ – ಕೊಡವೂರು

ಕೊಡವೂರು ವಾರ್ಡ್ ಸುಂದರ ಕಾಣಲೆಂದು ಅಯೋಧ್ಯಾ ರಾಮ ಪ್ರತಿಷ್ಟೆಯ ನಿಮಿತ್ತ ಗೋಡೆಯಲ್ಲಿ ರಾಮ ರಾಮಾಯಣಕ್ಕೆ ಸಂಬಂಧ ಪಟ್ಟ ಚಿತ್ರಗಳನ್ನು ನೋಡಿದ್ದೇವೆ. ಇದೀಗ ಉಳಿದ ಗೋಡೆಗಳಿಗೆ ಕೊಡವೂರಿನ ಕಲಾಕಾರರನ್ನು ಗುರುತಿಸಿ ಹಾಗೂ ಚಿಕ್ಕ ಚಿಕ್ಕ ಮಕ್ಕಳನ್ನು ಕರೆದು ಚಿತ್ರ ಬಿಡಿಸಲು ಅವಕಾಶವನ್ನು ನೀಡುತ್ತಿದೆ. ಕೊಡವೂರು ಗ್ರಾಮದ ಚಿಕ್ಕ ಚಿಕ್ಕ ಮಕ್ಕಳು ಬಂದು ಚೊಕ್ಕ ಗ್ರಾಮದ ಸಂಕಲ್ಪವನ್ನು ತೊಟ್ಟಿದ್ದಾರೆ.

ಈ ಒಂದು ಕಾರ್ಯಕ್ರಮ ತಮ್ಮ ಪೂರ್ತಿ ಸಹಕಾರವನ್ನು ಉಡುಪಿಯ ಖ್ಯಾತ ಚಿತ್ರ ಕಲಾವಿದರಾದ ಚಂದ್ರ ಚಿತ್ರ ಕಡೆಕಾರ್ ಇವರ ಮಾರ್ಗದರ್ಶನದಲ್ಲಿ ನಗರ ಸಭಾ ಸದಸ್ಯರಾದ ವಿಜಯ್ ಕೊಡವೂರು ಇವರ ವಿಶಿಷ್ಟ ಕಲ್ಪನೆಯು ಸ್ವಚ್ಚ ಗ್ರಾಮ ಚೊಕ್ಕ ಗ್ರಾಮ ವಾಗಳು ಸಾಧ್ಯವಾಯಿತು.

 
 
 
 
 
 
 
 
 
 
 

Leave a Reply