ಮುಕ್ಕ : ಲಾರಿ ಹರಿದು ಬಾಲಕಿ ಮೃತ್ಯು!

ರಸ್ತೆ ಬದಿ ತಂದೆಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯ ಮೇಲೆ ಲಾರಿ ಹರಿದ ಘಟನೆ ಸುರತ್ಕಲ್ ಬಳಿಯ ಮುಕ್ಕ ಹೆದ್ದಾರಿಯಲ್ಲಿ ನಡೆದಿದೆ. 

ಉತ್ತರ ಕರ್ನಾಟಕ ಮೂಲದ ವ್ಯಕ್ತಿ ಚಲಾಯಿಸುತ್ತಿದ್ದ ಲಾರಿ ಮೊದಲಿಗೆ ಸ್ಕೂಟರಿಗೆ ಡಿಕ್ಕಿಯಾಗಿದ್ದು ಈ ವೇಳೆ, ಅಲ್ಲಿಯೇ ನಡೆದು ಹೋಗುತ್ತಿದ್ದ ಬಾಲಕಿ ಮತ್ತು ತಂದೆ ರಸ್ತೆಗೆ ಬಿದ್ದಿದ್ದಾರೆ. ಆದರೆ ಲಾರಿಯನ್ನು ನಿಲ್ಲಿಸದೆ ಮುಂದೆ ಹರಿದಿದ್ದು ಬಾಲಕಿಯ ಮೇಲಿನಿಂದಲೇ ಹರಿದು ಹೋಗಿದೆ.‌ ತಂದೆ ಇನ್ನೊಂದು ಬದಿಗೆ ಬಿದ್ದಿದ್ದರಿಂದ ಬಚಾವಾಗಿದ್ದಾರೆ. ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ. ಮುಕ್ಕ ಮಿತ್ರಪಟ್ಣದ ಯಶು ಕುಮಾರ್ ಅವರ ಪುತ್ರಿ ಮಾನ್ವಿ (12) ಮೃತ ಮಗು. 

ಮಾನ್ವಿ ಎನ್ಐಟಿಕೆ ಶಾಲೆಯಲ್ಲಿ ಏಳನೇ ತರಗತಿ ಕಲಿಯುತ್ತಿದ್ದು ಶಾಲೆ ಬಿಟ್ಟು ತಂದೆಯ ಜೊತೆಗೆ ಮನೆಯ ಕಡೆಗೆ ನಡೆದು ಬರುತ್ತಿದ್ದಾಗ ಅಪಘಾತ ನಡೆದಿದೆ. ಕೂಡಲೇ ಸ್ಥಳೀಯರು ಸೇರಿ ಲಾರಿ ಚಾಲಕನಿಗೆ ಎರಡೇಟು ಬಿಗಿದಿದ್ದಾರೆ.‌ ಲಾರಿ ಚಾಲಕ ಕುಡಿದ ಮತ್ತಿನಲ್ಲಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ‌ಬಳಿಕ ಸುರತ್ಕಲ್ ಟ್ರಾಫಿಕ್ ಪೊಲೀಸರು ಬಂದು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೂ ಸ್ಥಳೀಯರು ಜೋರು ಮಾಡಿದ್ದು ಜಟಾಪಟಿ ನಡೆಸಿದ್ದಾರೆ.

 
 
 
 
 
 
 
 
 
 
 

Leave a Reply