ಆಸ್ಟ್ರೇಲಿಯಾದ ಬ್ರೆಸ್ಬನ್ ನಗರದಲ್ಲಿ ಬಂದಿಳಿದ ಪುತ್ತಿಗೆ ಶ್ರೀ

ಪರ್ಯಾಯ ಸಂಚಾರ ನಿಮಿತ್ತ ಆಗಮಿಸಿದ ಭಾವಿ ಪರ್ಯಾಯ ಶ್ರೀಪಾದರಾದ ಪೂಜ್ಯ ಪುತ್ತಿಗೆ ಶ್ರೀಪಾದರನ್ನು ಭಕ್ತಿ ಗೌರವಾದರಗಳೊಂದಿಗೆ
ಭಕ್ತಜನರು ಸ್ವಾಗತಿಸಿದರು.

(ಬ್ರೆಸ್ಬನ್ ಮಹಾನಗರವು 2032 ರಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸಲಿದೆ .)

ಪೂಜ್ಯ ಶ್ರೀಪಾದರು ಇಲ್ಲಿ ನೆರೆದ ನೂರಾರು ಮಂದಿಗೆ ಭಗವದ್ಗೀತಾಲೇಖನ ಯಜ್ಞ ದೀಕ್ಷೆಯನ್ನು ನೀಡಿದರು .

ಭಕ್ತರ ಮನೆಗಳಲ್ಲಿ ಸಂಸ್ಥಾನ ಪೂಜಾದಿಗಳು ಸಂಪನ್ನಗೊಂಡವು.

ಈ ಸಂದರ್ಭದಲ್ಲಿ
ಭಕ್ತಸಮೂಹವನ್ನು ತಮ್ಮ ಪರ್ಯಾಯಕ್ಕೆ ಪ್ರೀತಿಯಿಂದ ಆಹ್ವಾನಿಸಿದರು .

ಶ್ರೀಗಳು ಇಲ್ಲಿಂದ ಸಿಡ್ನಿ , ಮೆಲ್ಬೋರ್ನ್ ನಗರಗಳಿಗೂ ಭೇಟಿ ನೀಡಿ ಅನುಗ್ರಹಿಸಲಿದ್ದಾರೆ.

 
 
 
 
 
 
 
 
 
 
 

Leave a Reply