ಶಿವಳ್ಳಿ ಕುಟುಂಬ ಆಫ್ ನಾರ್ಥ್ ಅಮೇರಿಕಾದಿಂದ ಯುಗಾದಿ ಹಬ್ಬ ಆಚರಣೆ

ಅವಿಭಾಜಿತ ದಕ್ಷಿಣ ಕನ್ನಡ, ಉಡುಪಿ ಪ್ರದೇಶದಿಂದ ವಲಸೆ ಬಂದು ಉತ್ತರ ಅಮೆರಿಕದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ವಿಪ್ರ ಕುಟುಂಬಗಳನ್ನು ಒಟ್ಟು ಸೇರಿಸಿ, ಅಮೆರಿಕದಲ್ಲಿ ನೆಲೆಸಿರುವ ಮುಂದಿನ ತಲೆಮಾರಿನವರಿಗೂ ಶಿವಳ್ಳಿ/ಊರಿನ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯ ಪರಿಚಯ ಮಾಡಿಸುತ್ತಾ, ಆ ಸಂಪ್ರದಾಯ, ಪರಂಪರೆಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಹುಟ್ಟುಹಾಕಿರುವ “ಶಿವಳ್ಳಿ ಕುಟುಂಬ ಆಫ್ ನಾರ್ಥ್ ಅಮೇರಿಕಾ” ಎಂದಿನಂತೆ ಏಪ್ರಿಲ್ 27-28, 2024 ರಂದು ಈ ವರ್ಷದ ಸೌರಮಾನ ಯುಗಾದಿ ಹಬ್ಬದ ಸಂಭ್ರಮ ಆಚರಣೆಯನ್ನು ಡಿಜಿಟಲ್ ವರ್ಚುಯಲ್ ವೇದಿಕೆಯಲ್ಲಿ ನಡೆಸಬೇಕೆಂದು ನಿಶ್ವಯಿಸಿದೆ. ಎರಡು ದಿನಗಳಲ್ಲಿ ಅಮೇರಿಕಾದ ಸಮಯ ಸಂಜೆ 4:3೦-8:30 EST ಗಂಟೆಗೆ ಯೌಟ್ಯೂಬ್ ಚಾನೆಲ್ ನಲ್ಲಿ ಯುಗಾದಿ ಸಂಭ್ರಮ -೨೦೨೪ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿದ್ದು, ಎಲ್ಲ ಭಾಂದವರು https://www.youtube.com/c/ShivalliKutumbaNAEvents ಮೂಲಕ ನೋಡಬಹುದಾಗಿದೆ. 

ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಪೇಜಾವರ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಆಶೀರ್ವಚನ, ಆಸ್ಟಿನ್ ಕೃಷ್ಣ ಮಠದ ಪ್ರಧಾನ ಅರ್ಚಕರಾದ ಶ್ರೀ ಅವಿನಾಶ್ ಆಚಾರ್ ಅವರ ಪಂಚಾಗ ಶ್ರವಣದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ವಿದ್ವಾನ್ ಕೃಷ್ಣರಾಜ್ ಭಟ್ ಕುತ್ಪಾಡಿಯವರು, ವಿದುಷಿ ಭ್ರಮರಿ ಶಿವಪ್ರಕಾಶ್ ಅವರು ಭಾಗವಹಿಸಲಿದ್ದಾರೆ. ಅಮೇರಿಕಾದಲ್ಲಿ ನೆಲೆಸಿರುವ ಕುಟುಂಬದ ಸದಸ್ಯರಿಂದ ಮನರಂಜನೆ ಕಾರ್ಯಕ್ರಮ ಇರುವುದೆಂದು ಶಿವಳ್ಳಿ ಕುಟುಂಬದ ಕಲ್ಚರಲ್ ಸಮಿತಿಯ ಅಧ್ಯಕ್ಷರಾದ ಸಂದೇಶ ಭಾರ್ಗವ್ ರವರು ತಿಳಿಸಿದ್ದಾರೆ. 

ದೇಶ ವಿದೇಶದಲ್ಲಿ ನೆಲೆಸಿರುವ ದಕ್ಷಿಣ ಕನ್ನಡ, ಉಡುಪಿಯ ಬಂಧುಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಿವಳ್ಳಿ ಕುಟುಂಬದ ಅಧ್ಯಕ್ಷರಾದ ಸಂತೋಷ್ ಗೋಳಿ, ಉಪಾಧ್ಯಕ್ಷ ಪ್ರಕಾಶ್ ಉಡುಪ, ಮಹಾ ಕಾರ್ಯದರ್ಶಿ ಅಕ್ಷತಾ ಮಾವಂತೂರ್, ಖಜಾಂಜಿ ಮೋಹನ್ ಹೆಬ್ಬಾರ್, ಸಹ ಖಜಾಂಜಿ ವೆಂಕಟೇಶ್ ಪೊಳಲಿ, ಕಾರ್ಯಾಧ್ಯಕ್ಷ ಶ್ರೀಶ ಜಯಸೀತಾರಾಂ, ಡೈರೆಕ್ಟರ್ ಗಳಾದ ಮನಮೋಹನ್ ಕಟಪಾಡಿ, ರಾಜೇಂದ್ರ ಕೆದ್ಲಾಯ ಹಾಗೂ ಪ್ರಶಾಂತ ಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply