ಅಮೇರಿಕಾದಲ್ಲಿ ಸಂಭ್ರಮದ ಯುಗಾದಿ ಆಚರಣೆ

ಪರಮಪೂಜ್ಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿಶ್ವಾದ್ಯಂತ ಶ್ರೀ ಕೃಷ್ಣ ಭಕ್ತಿ ಪ್ರಸಾರಕ್ಕಾಗಿ ಸ್ಥಾಪಿಸಿರುವ ಹದಿನೈದು ಶ್ರೀ ಪುತ್ತಿಗೆ ಮಠಗಳಲ್ಲಿಯೂ ಚಾಂದ್ರ ಯುಗಾದಿ ಹಬ್ಬದ ಆಚರಣೆಯು ಸಾಂಗವಾಗಿ ವೈಭವದಿಂದ ನೆರವೇರಿತು .

ಅನಿವಾಸಿ ಭಾರತೀಯ ಭಕ್ತರು ಬೆಳಿಗ್ಗಿನಿಂದ ನಡೆದ ಹೋಮ, ಪೂಜಾದಿ ಕಾರ್ಯಕ್ರಮಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡರು.

ಪೂಜಾ ನಂತರದಲ್ಲಿ ಪಂಚಾಗ ಶ್ರವಣ ವ್ವವಸ್ಥೆ ಮಾಡಲಾಗಿದ್ದು 12 ರಾಶಿ ಸಂಜಾತರ ವರ್ಷ ಭವಿಷ್ಯವನ್ನು ಕೇಳಲು ಜನರು ಕಿಕ್ಕಿರಿದು ನೆರೆದಿದ್ದರು.

ಪೂಜಾ ನಂತರ ಪ್ರಸಾದದ ಜೊತೆಗೆ ಬೇವುಬೆಲ್ಲವನ್ನು ಹಂಚಲಾಯಿತು.

ಪೂಜ್ಯ ಶ್ರೀಪಾದರು ವೀಡಿಯೋ ಸಂದೇಶದ ಮೂಲಕ ಭಕ್ತ ಜನರನ್ನು ಹರಸಿದರು.

ಅಮೇರಿಕಾದಲ್ಲಿ ಮೊಟ್ಟ ಮೊದಲು ಪೂಜ್ಯ ಪುತ್ತಿಗೆ ಶ್ರೀಪಾದರು ಸ್ಥಾಪಿಸಿದ್ದ ಶ್ರೀಪುತ್ತಿಗೆ ಮಠದ ಶ್ರೀ ವೆಂಕಟ ಕೃಷ್ಣ ಕ್ಷೇತ್ರದಲ್ಲಿಸಾವಿರಾರು ಭಕ್ತರು ಭಾಗವಹಿಸಿದರು.

 
 
 
 
 
 
 
 

Leave a Reply