ಯುವಕ ಮಂಡಲ (ರಿ.) ಸಾಣೂರು ಹಾಗೂ ಅಂಗ ಸಂಸ್ಥೆಯ ವಾರ್ಷಿಕೋತ್ಸವ ಸಂಭ್ರಮ

ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇದರ 69 ನೇ ವಾರ್ಷಿಕೋತ್ಸವ ಹಾಗೂ ಇದರ ಅಂಗ ಸಂಸ್ಥೆ ಶ್ರೀ ವಾಣೀ ಯಕ್ಷಗಾನ ಸಭಾ ಯುವಕ ಮಂಡಲ (ರಿ.) ಸಾಣೂರು ಇದರ 52 ನೇ ವಾರ್ಷಿಕೋತ್ಸವ ಸಂಭ್ರಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ 2023 ನೇ ಜನವರಿ 7 ಮತ್ತು 8 ರಂದು ಪಟೇಲ್ ಮುದ್ದಣ್ಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ ಜರುಗಲಿದೆ ಜನವರಿ 7 ರಂದು ಬೆಳಿಗ್ಗೆ 6.00 ಗಂಟೆಗೆ ಮಂಡಲದ ಕಚೇರಿಯಲ್ಲಿ ಗಣಹೋಮ 8.00 ಗಂಟೆಗೆ ಧ್ವಜಾರೋಹಣ 8.15 ಕ್ಕೆ ವಾರ್ಷಿಕೋತ್ಸವ ಸಂಭ್ರಮದ ಉದ್ಘಾಟನೆ ಸಂಜೆ 6.00 ಗಂಟೆಗೆ ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 8.00 ಗಂಟೆಗೆ ಸಭಾ ಕಾರ್ಯಕ್ರಮ ಸುಮಾರು 9 ಲಕ್ಷ ರೂಪಾಯಿಯ ಶಾಶ್ವತ ಶೈಕ್ಷಣಿಕ ವಿದ್ಯಾನಿಧಿ ಮತ್ತು ದತ್ತಿ ನಿಧಿಗೆ ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳು ಚಾಲನೆ ನೀಡಲಿದ್ದಾರೆ ರಾತ್ರಿ 10.00 ಗಂಟೆಗೆ ನಾಟಕ ಪ್ರದರ್ಶನಗೊಳ್ಳಲಿದೆ ಜನವರಿ 8 ರಂದು ಸಂಜೆ 6.00 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 8.30 ಕ್ಕೆ ತುಳು ಯಕ್ಷಗಾನ ಪ್ರದರ್ಶನವಾಗಲಿದೆ 2 ದಿನದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮಂಡಲದ ಕಾರ್ಯದರ್ಶಿ ಶ್ರೀ ಮೋಹನ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply