ಹುಲಿ ಮುಖದ ವಿಮಾನದಲ್ಲಿ ಎಂಟು ಚಿರತೆಗಳು ಭಾರತಕ್ಕೆ!

ಹುಲಿ ಮುಖದ ವಿಮಾನದಲ್ಲಿ ಎಂಟು ಚಿರತೆಗಳು ನಮೀಬಿಯಾದಿಂದ ಭಾರತಕ್ಕೆ ಬರಲಿವೆ. ಈ ವಿಶೇಷ ವಿಮಾನದ ಫೋಟೋಗಳನ್ನು  ನಮಿಬಿಯಾದಲ್ಲಿರುವ ಭಾರತದ ಹೈಕಮಿಷನರ್‌ ಕಚೇರಿಯು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಚಿರತೆಗಳನ್ನು ತರಲು ವಿಶೇಷ ವಿಮಾನ ಈಗಾಗಲೇ ನಮೀಬಿಯಾಕ್ಕೆ ತೆರಳಿದೆ. B747 ಜಂಬೋ ಜೆಟ್ ವಿಮಾನವನ್ನು ಭಾರತದ ರಾಷ್ಟ್ರೀಯ ಪ್ರಾಣಿ “ಹುಲಿʼಯಂತೆ ವಿನ್ಯಾಸ ಮಾಡಲಾಗಿದ್ದು ಫೋಟೋಗಳನ್ನು ಬಿಡುಗಡೆ ಮಾಡಿದೆ.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್ ಟ್ವಿಟರ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದು, ಸೌಹಾರ್ದ ರಾಯಭಾರಿಗಳನ್ನು ಸ್ವಾಗತಿಸಲು ನಾವು ಕಾತುರದಿಂದ ಕಾಯುತ್ತಿದ್ದೇವೆ. ಕೆಲವು ದಶಕಗಳ ನಂತರ ಆ ಹುಲಿ ದನಿಗಳು ದೇಶದಲ್ಲಿ ಮತ್ತೆ ಕೇಳಿ ಬರಲಿವೆ ಎಂದರು. ನಮೀಬಿಯಾದಿಂದ ತರಲಾಗುತ್ತಿರುವ 8 ಚಿರತೆಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗುವುದು. ಸೆಪ್ಟೆಂಬರ್ 17 ರಂದು ಮೋದಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಚಿರತೆಗಳನ್ನು ಉದ್ಯಾನವನದ ಆವರಣಕ್ಕೆ ಬಿಡಲಾಗುತ್ತದೆ.

ನಮೀಬಿಯಾದಿಂದ ಬರಲಿರುವ ಈ ಚಿರತೆಗಳು ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಮಾಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಖಾಲಿ ಹೊಟ್ಟೆಯಲ್ಲಿರುವುದು ಚಿರತೆಗಳ ಪ್ರಯಾಣಕ್ಕೆ ಸುರಕ್ಷಿತ, ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

 
 
 
 
 
 
 
 
 
 
 

Leave a Reply