ರಾತ್ರಿ ವಿಶ್ರಾಂತಿಗೆ ನಿಲ್ಲಿಸಿದ್ದ ಲಾರಿಯಿಂದ 5 ಟಯರ್ ಕದ್ದ ಕಳ್ಳರು!

ಶಿರೂರು ಟೋಲ್‌ಗೇಟ್ ಬಳಿ ರಾತ್ರಿ ವೇಳೆ ವಿಶ್ರಾಂತಿಗೆ ನಿಲ್ಲಿಸಿದ್ದ ಲಾರಿಯಿಂದ 5 ಟಯರ್ ಕಳವು ಮಾಡಿರುವ ಘಟನೆ ಶಿರೂರು ಟೋಲ್‌ಗೇಟ್ ಬಳಿ ನಡೆದಿದೆ.ಅಂಕೋಲಾ ಮೂಲದ ಲಾರಿಯೊಂದು ಮಂಗಳೂರಿಗೆ ತೆರಳುವ ವೇಳೆ ರಾತ್ರಿ ವಿಶ್ರಾಂತಿಗಾಗಿ ಟೋಲ್‌ಗೇಟ್‌ನ ಎಡಭಾಗದಲ್ಲಿ ನಿಲ್ಲಿಸಲಾಗಿತ್ತು.ಚಾಲಕ ನಿದ್ರೆಗೆ ಜಾರಿದ ವೇಳೆ ಕಳ್ಳರ ತಂಡವೊಂದು 5 ಟಯರ್‌ಗಳನ್ನು ಕದ್ದಿದ್ದಾರೆ.ಹೊಸ ಲಾರಿಯಾಗಿದ್ದು ಒಟ್ಟು ಟಯರ್‌ನ ಬೆಲೆ 1ಲಕ್ಷಕ್ಕೂ ಅಧಿಕ ಮೌಲ್ಯವಾಗಿದೆ ಎಂದು ಚಾಲಕ ಶಾಯಿಲ್ ಹೇಳಿದ್ದಾರೆ.

ಶಿರೂರಿನ ಟೋಲ್‌ಗೇಟ್ ಬಳಿ ಸಾಲು ಸಾಲಾಗಿರುವ ಅನಧೀಕ್ರತ ಅಂಗಡಿಗಳಿಂದಾಗಿ ಕಳ್ಳತನ ಮತ್ತು ಗಾಂಜಾ ಪ್ರಕರಣ ಹೆಚ್ಚುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಹಗಲು ವೇಳೆ ಮತ್ತು ರಾತ್ರಿ 10 ಗಂಟೆಯ ವರೆಗೆ ಈ ಅಂಗಡಿಗಳು ತೆರೆದಿದ್ದರೆ ಸಮಸ್ಯೆಗಳಿಲ್ಲ. ಆದರೆ ಈಗೀಗ ಬೆಳಿಗ್ಗೆಯವರೆಗೆ ಬಾಗಿಲು ತೆರೆದಿರುವ ಪರಿಣಾಮ ಅನೇಕ ಕಳ್ಳತನ ಪ್ರಕರಣಗಳ ಪ್ರಮುಖ ಕೇಂದ್ರವಾಗಿದೆ.ವಲಸೆ ವ್ಯಕ್ತಿಗಳು ಮತ್ತು ಸೂಕ್ತ ದಾಖಲೆಗಳಿಲ್ಲದ ವ್ಯಕ್ತಿಗಳು ಅಂಗಡಿ ಮಾಲಿಕರಾಗಿರುವುದು ಮತ್ತು ಯಾವುದೇ ಸಿ.ಸಿ ಕ್ಯಾಮರಾ ಅಳವಡಿಸದೇ ಇರುವುದರಿಂದ ಅಪರಿಚಿತರು ಇಂತಹ ಅಂಗಡಿಗಳನ್ನು ಆಯ್ಕೆಮಾಡಿಕೊಂಡಿರುತ್ತಾರೆ.ಅಪರಿಚಿತ ಮತ್ತು ಅನುಮಾನಾಸ್ಪದ ಕಾರುಗಳು ಬರುತ್ತಿರುತ್ತದೆ. ಮತ್ತು ಶಿರೂರಿನಲ್ಲಿ ಆಗಾಗ ನಡೆಯುವ ಸರಣಿ ಕಳ್ಳತನ ಪ್ರಕರಣಗಳಿಗೆ ಇದು ಕಾರಣವಾಗಿರುತ್ತದೆ.ಪೊಲೀಸರು ಕಳೆದ ಒಂದು ಹತ್ತಕ್ಕೂ ಅಧಿಕ ಗಾಂಜಾ ಸೇವಿಸುತ್ತಿರುವವರು ಈ ಪರಿಸರದ ಸುತ್ತಮುತ್ತ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.ಮಾತ್ರವಲ್ಲದೆ ಆಕ್ರಮ ಮದ್ಯ ಮಾರಾಟ ಕೂಡ ನಡೆಯುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಹೆದ್ದಾರಿ ಪ್ರಾಧಿಕಾರದ ಕ್ಯಾಂಟಿನ್ ಇದೆ.ಮತ್ತು ಈ ಕ್ಯಾಂಟಿನ್ ಮತ್ತು ಟೋಲ್ ಸುತ್ತಮುತ್ತ ಸಿಸಿ ಕ್ಯಾಮರಾಗಳಿರುವ ಕಾರಣ ಪ್ರತಿಯೊಂದು ಚಲನವಲನ ದಾಖಲಾಗುತ್ತದೆ.ಹೀಗಾಗಿ ರಾತ್ರಿ 10 ಗಂಟೆಯ ಬಳಿಕ ಅನಧೀಕೃತ ಅಂಗಡಿಗಳು ಬಂದ್ ಮಾಡಿಸಬೇಕು.ಮತ್ತು ಈ ಕುರಿತು ಆರಕ್ಷಕ ಇಲಾಖೆಗೆ ಮನವಿ ಕೂಡ ನೀಡಲಾಗಿದೆ  ಎನ್ನುವುದು ಇಲ್ಲಿನ ಸ್ಥಳೀಯರ ಹೇಳಿಕೆಯಾಗಿದೆ.

” ಈಗಾಗಲೆ ಹಲವು ಬಾರಿ ಅನಧೀಕ್ರತ ಅಂಗಡಿಗಳನ್ನು ಹತ್ತು ಗಂಟೆಯ ಬಳಿಕ ಬಾಗಿಲು ತೆರೆಯಬಾರದೆಂದು ತಿಳಿಸಲಾಗಿದೆ.ಇವುಗಳಲ್ಲಿ ಅನಧೀಕ್ರತ ಚಟುವಟಿಕೆ ನಡೆಯುವ ಕುರಿತು ದೂರುಗಳು ಕೇಳಿಬಂದಿದೆ.ಇಲಾಖೆ ಕೂಡ ಗಂಭೀರವಾಗಿ ಪರಿಗಣಿಸಿದೆ.ಹಲವು ಗಾಂಜಾ ವ್ಯಸನಿಗಳನ್ನು ಶಿರೂರು ಟೋಲ್ ಗೇಟ್ ಹಾಗೂ ಸುತ್ತಮುತ್ತ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.ಸಣ್ಣಪುಟ್ಟ ಸರಣಿ ಕಳ್ಳತನ ನಡೆಸುವವರು ಮತ್ತು ಪೊಲೀಸ್ ಚಲನವಲನ ಮಾಹಿತಿದಾರರು ಈ ಅಂಗಡಿಗಳನ್ನು ಅವಲಂಬಿಸುವ ಮಾಹಿತಿ ಇದೆ.ಇವುಗಳ ಕುರಿತು ಇಲಾಖೆ ಸಮರ್ಪಕ ಕ್ರಮ ಕೈಗೊಳ್ಳಲಿದೆ.ಲಾರಿ ಟಯರ್ ಕಳ್ಳತನ ಪ್ರಕರಣ ಬೇಧಿಸಲು ಪೊಲೀಸ್ ತಂಡ ಕಾರ್ಯಪ್ರವತ್ತರಾಗಿದೆ.ಕಾನೂನು ಬಾಹಿರ ಚಟುವಟಿಕೆಗೆ ನಿರ್ಧಾಕ್ಷಿಣ್ಯವಾಗಿ ಕಡಿವಾಣ ಹಾಕಲಾಗುವುದು.” ~ಸಂತೋಷ ಕಾಯ್ಕಿಣಿ, ವ್ರತ್ತ ನಿರೀಕ್ಷಕರು ಬೈಂದೂರು.

 
 
 
 
 
 
 
 
 
 
 

Leave a Reply