ಪ್ರಧಾನಿ ಮೋದಿಯವರ ಖಾಸಗಿ ವೆಬ್‌ಸೈಟ್ ಹ್ಯಾಕ್ 

ನವದೆಹಲಿ: ಪ್ರಧಾನಿ ಮೋದಿಯವರ ಖಾಸಗಿ ವೆಬ್‌ಸೈಟ್ ಹ್ಯಾಕ್ ಆಗಿದ್ದು, ಅದರ ಟ್ವಿಟರ್ ಅಕೌಂಟ್ ಮೂಲಕ ಅನುಯಾಯಿಗಳಿಗೆ ಕ್ರಿಪ್ಟೋಕರೆನ್ಸಿಯಿಂದ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಂಬ ಸರಣಿ ಟ್ವೀಟ್‌ಗಳನ್ನು ಮಾಡಲಾಗಿದೆ ಎಂದು ಟ್ವಿಟರ್ ಖಚಿತಪಡಿಸಿದೆ.ಪ್ರಧಾನಿ ಮೋದಿ ಅವರ ಟ್ವಿಟರ್‌ನ ಖಾಸಗಿ ಖಾತೆ ಹಾಗೂ ಮೊಬೈಲ್‌ನಲ್ಲಿ ಇರುವ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದರ  ಬಗ್ಗೆ ದೃಢಪಡಿಸಿದ್ದು, ಖಾತೆ ಸುರಕ್ಷಿತಗೊಳಿಸಲು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದೆ.
ಸಕ್ರಿಯವಾಗಿ ಈ ಪರಿಸ್ಥಿತಿ ಬಗ್ಗೆ ತನಿಖೆ ನಡೆದಿದೆ. ಇನ್ನು ಬೇರೆ ಖಾತೆಗಳು ಹ್ಯಾಕ್ ಆಗಿರುವ ಬಗ್ಗೆ ಇನ್ನೂ ಮಾಹಿತಿ ಇಲ್ಲ ಎಂದು ಟ್ವಿಟರ್ ವಕ್ತಾರರು ಇಮೇಲ್ ಮೂಲಕ ಮಾಹಿತಿ ನೀಡಿದ್ದಾರೆ. ಡಿಲೀಟ್ ಮಾಡಿರುವ ಟ್ವೀಟ್‌ಗಳಲ್ಲಿ ಪ್ರಧಾನಿ ಮೋದಿ ಅವರ ಅನುಯಾಯಿಗಳಿಗೆ ಕ್ರಿಪ್ಟೋಕರೆನ್ಸಿ ಮೂಲಕ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಂದು ಕೇಳಿಕೊಂಡಿವೆ.​
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply