Janardhan Kodavoor/ Team KaravaliXpress
23.6 C
Udupi
Thursday, December 8, 2022
Sathyanatha Stores Brahmavara

ಹಿರಿಯ ಕಾಂಗ್ರೆಸ್ ಮುಖಂಡ ಹಾಜಿ ಕೆ. ಆತ್ರಾಡಿ ಇದಿನಬ್ಬ ಇನ್ನಿಲ್ಲ..

ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ಹೊಂದಿದ ನಾಯಕರಲ್ಲಿ ಓರ್ವರಾದ ಆತ್ರಾಡಿ ಇದಿನಬ್ಬ ಎಂದೇ ಖ್ಯಾತರಾದ. ಹಾಜಿ ಕೆ. ಆತ್ರಾಡಿ ಇದಿನಬ್ಬ(72) ರವರು ಇಂದು ಬೆಳಗ್ಗಿನ ನಸುಕಿನ ವೇಳೆ ಆಸ್ಪತ್ರೆಯಲ್ಲಿ ನಿಧನರಾದರು, ಮೃತರು. ಪತ್ನಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನುಹಾಗು  ಅಪಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಅಗಲಿದ್ದಾರೆ. ಈ ಹಿಂದೆ ಅವರು ಪವಿತ್ರ ಹಜ್ ಯಾತ್ರೆ ನಡೆಸಿದ್ದಾರೆ.

ಮೃತರು ಎಲ್ಲರೊಂದಿಗೆ ಬೆರೆತು. ಬಾಳುವ ಸಾತ್ವಿಕ ಮನಸ್ಸಿನ ಒಡನಾಟ ಹೊಂದಿದ್ದ ರು ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಮಾಜಿ ಶಾಸಕ ಯುಆರ್ ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮೋಹನ ದಾಸ್ ನಾಯಕ ಪರ್ಕಳ, ಗಣೇಶ್ ರಾಜ್ ಸರಳಬೆಟ್ಟು ಮೊದಲಾದವರು ಸಂತಾಪ ಸೂಚಿಸಿದ್ದಾರೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!