ಪರೀಕ್ಷೆಯಲ್ಲಿ ಅನುತ್ತೀರ್ಣ; ಜಿಗುಪ್ಸೆಗೊಂಡು ವಿದ್ಯಾರ್ಥಿ ಆತ್ಮಹತ್ಯೆ!

ಉಡುಪಿ: ಬಿಎಎಂಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಮಾನಸಿಕ‌ ಖಿನ್ನತೆಗೆ ಒಳಗಾದ  ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ಪರ್ಕಳ ಸಮೀಪದ ಕಬ್ಯಾಡಿ ಎಂಬಲ್ಲಿ ನಡೆದಿದೆ.

ಕಬ್ಯಾಡಿಯ ಪ್ರಕಾಶ ಕುಲಕರ್ಣಿ ಎಂಬವರ ಮಗ ಪೃಥ್ವಿ ಕುಲಕರ್ಣಿ(24) ಮೃತ ದುರ್ದೈವಿ.

ಬಿ.ಎ.ಎಂ.ಎಸ್ ಪರೀಕ್ಷೆಯಲ್ಲಿ ಅನುತ್ತಿರ್ಣನಾದ್ದರಿಂದ ಸುಮಾರು ಒಂದು ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪೃಥ್ವಿ, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಹಾಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply