ಇಸ್ರೇಲ್ ಗೆ ಬ್ರಿಟನ್ ಶಕ್ತಿ!

ಹಮಾಸ್‌ ಉಗ್ರರ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ, ಇಸ್ರೇಲ್ ಗೆ ಭಾರತ ಸೇರಿ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿದ್ದು ಅದರಲ್ಲೂ, ಅಮೆರಿಕ ಉಗ್ರರ ನಿರ್ನಾಮಕ್ಕೆ ಶಸ್ತ್ರಾಸ್ತ್ರಗಳ ನೆರವಿನ ಮೂಲಕ ಸಹಾಯ ಮಾಡಿದ್ದು ಇದರ ಬೆನ್ನಲ್ಲೇ, ಬ್ರಿಟನ್‌ ಕೂಡ ನೌಕೆಗಳು ಹಾಗೂ ಯುದ್ಧವಿಮಾನಗಳ ನೆರವಿನ ಮೂಲಕ ಇಸ್ರೇಲ್ ಗೆ ಸಾಥ್ ನೀಡಿವೆ.

ಬ್ರಿಟನ್ ರಾಯಲ್ ನೇವಿಯ ಎರಡು ನೌಕೆಗಳು ಮಾತ್ರವಲ್ಲದೆ ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇರಿಸಲು, ಗಸ್ತು ತಿರುಗಲು, ಉಗ್ರರಿಗೆ ಶಸ್ತ್ರಾಸ್ತ್ರಗಳ ಸಾಗಣೆ ಮಾಡಲಾಗುತ್ತಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ಪಿ8 ಯುದ್ಧವಿಮಾನದ ನೆರವನ್ನೂ ಇಸ್ರೇಲ್‌ಗೆ ಒದಗಿಸಿದೆ. ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಈ ಕುರಿತು ಮಾತನಾಡಿದ್ದು, “ಒಂದು ವಾರದಲ್ಲಿ ನಡೆದ ಘಟನೆಗಳು ಮನುಕುಲಕ್ಕೆ ಅಪಾಯಕಾರಿಯಾಗಿವೆ. ಜಗತ್ತಿನ ಅತ್ಯಾಧುನಿಕ ನೌಕೆ, ಯುದ್ಧವಿಮಾನಗಳನ್ನು ನಿಯೋಜಿಸಿ ಶಾಂತಿ ಹಾಗೂ ಸ್ಥಿರತೆ ಕಾಪಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.

Leave a Reply