ಬೆಳ್ಳಂಬೆಳಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷನ ಭೀಕರ ಹತ್ಯೆ!

ಬೆಳ್ಳಂಬೆಳಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷನ ಭೀಕರ ಹತ್ಯೆ ಅಫಜಲಪುರ ತಾಲೂಕಿನ ಭೀಮಾ ತೀರದ ಚೌಡಾಪುರ ಬಸ್ ನಿಲ್ದಾಣ ಎದುರು ನಡೆದಿದೆ.

ಅಫಜಲಪುರ ತಾಲೂಕಿನ ಮದರಾ ಬಿ ಗ್ರಾಮ ಪಂಚಾಯತ್ ಅಧ್ಯಕ್ಷ ಗೌಡಪ್ಪ ಬಿರಾದಾರ (45) ಹತ್ಯೆಯಾದವರು. ಚೌಡಾಪುರ ಬಸ್ ನಿಲ್ದಾಣ ಎದುರು ನೂರಾರು ಜನರ ಸಮ್ಮುಖದಲ್ಲೇ ಬುಲೇರಾ ವಾಹನದಲ್ಲಿ ಬಂದ ದುಷ್ಕರ್ಮಿಗಳು ಗೌಡಪ್ಪ ಬಿರಾದಾರ ಅವರನ್ನು ಮಾರಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾರೆ.

ಗ್ರಾಮ ಪಂಚಾಯತ್ ಗೆ ಒಟ್ಟು ನಾಲ್ಕು ಸಲ ಸದಸ್ಯರಾಗಿ ಆಯ್ಕೆಯಾಗಿರುವ ಗೌಡಪ್ಪ ಬಿರಾದಾರ ಅವರು ಇತ್ತೀಚೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು, ಎಂದಿನಂತೆ ಮದರಾ ಬಿ ಗ್ರಾಮದಿಂದ ಚೌಡಾಪುರಕ್ಕೆ ಬಂದು ಬಸ್ ನಿಲ್ದಾಣ ಎದುರು ನಿಂತಾಗ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಹತ್ಯೆಗೈದಿದ್ದಾರೆ.

ಭೀತಿಗೊಂಡ ಜನತೆ: ಬರ್ಬರವಾಗಿ ನಡೆದ ಈ ಹತ್ಯೆ ಪ್ರಕರಣದಿಂದ ಜನ ಭೀತಿಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಪರಿಸರದಲ್ಲಿ ಶಾಂತಿ ನೆಲೆಸಿತ್ತು, ಆದರೆ ಈ ಕೊಳ್ಳೋ ಜನರಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ.

 
 
 
 
 
 
 
 
 
 
 

Leave a Reply