ಜನ ಔಷಧ ದಿನಾಚರಣೆಗೆ ಬ್ರಹ್ಮಾವರದಲ್ಲಿ ಚಾಲನೆ

ಉಡುಪಿ: ದೇಶಾದ್ಯಂತ ಇಂದು ಜನ ಔಷಧ ದಿನವನ್ನ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ ಪ್ರಧಾನಿ ಮೋದಿ ದೇಶದ ನಾಲ್ಕು ಭಾಗಗಳ ಜನೌಷಧ ಕೇಂದ್ರದ ಮಾಲೀಕರು ಹಾಗೂ ಫಲಾನುಭವಿಗಳ ಜತೆ ವಿಡಿಯೋ ಕಾಂಫರೆನ್ಸ್ ಮೂಲಕ ಮಾತುಕತೆ ನಡೆಸಿದರು. 

 ದಕ್ಷಿಣ ಭಾರತದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇವತ್ತು ನಾವು ದೇಶದಲ್ಲಿ 7500 ಜನ ಔಷಧಿ ಕೇಂದ್ರ ಸ್ಥಾಪನೆ ಮಾಡಿದ್ದೇವೆ. ಇವತ್ತು 7500ನೇ ಜನ ಔಷಧಿ ದಿನಾಚರಣೆಗೆ ವರ್ಚುಲ್ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಉಡುಪಿ ಒಂದು ಉತ್ತಮ ಕೇಂದ್ರವಾಗಿದ್ದು, ಈಗಾಗಲೇ ಇಲ್ಲಿ 71 ಜನ ಔಷಧಿ ಕೇಂದ್ರಗಳಿವೆ. ಸದ್ಯದಲ್ಲೆ ಪ್ರಧಾನಿ ಮೋದಿ ಅವರ ಟಾರ್ಗೆಟ್ ರೀಚ್ ಆಗ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಕೂಡಾ ತಿಳಿಸಿದ್ದು, ಆದಷ್ಟು ಬೇಗ ಟಾರ್ಗೆಟ್ ತಲುಪುವುದು ಎಂದರು.

ಇನ್ನು ಈ ಜನ ಔಷಧಿ ಜಾಗೃತಿ ಕಾರ್ಯವು ಒಂದು ವಾರದಿಂದ ನಡೆದಿದ್ದು, ಜನ ಸಾಮಾನ್ಯರು, ವೈದ್ಯರು ಹಾಗೂ ಖರೀದಿದಾರರಿಂದ ಜಾಗೃತಿ ಮೂಡಿಸಿದ್ದೇವೆ. 2013 ರಲ್ಲಿ ದೇಶದಲ್ಲಿ ಒಂದು ಸರ್ವೇ ನಡೆಯಿತು, ಒಂದು ಕುಟುಂಬ ಆರೋಗ್ಯಕ್ಕೆ , ವಿದ್ಯೆಗೆ, ದಿನನಿತ್ಯದ ಕೆಲಸಗಳಿಗೆ ಎಷ್ಟು ಖರ್ಚು ಮಾಡುತ್ತಿದೆ ಎಂದು. ಆಗ ಸುಮಾರು ಜನರು 15 ರಿಂದ 30 ರಷ್ಟು ಶೇಕಡಾ ವಾರ್ಷಿಕ ಆದಾಯವನ್ನು ಆರೋಗ್ಯಕ್ಕಾಗಿ ಮಧ್ಯಮ ಹಾಗೂ ಕೆಳ ವರ್ಗದ ಜನರು ಖರ್ಚು ಮಾಡುತ್ತಾರೆ. ಇದರಲ್ಲಿ ಒಂದು ಕಾಲು ಕೋಟಿ ಜನ ಬಡತನ ರೇಖೆಯಡಿ ಬರುತ್ತಾರೆ ಎಂಬುವುದು ತಿಳಿಯಿತು. ಹಾಗಾಗಿ ಮೋದಿ ಅವರು ಸುಮಾರು 2.33 ಲಕ್ಷ ಕೋಟಿಗಳನ್ನು ಆರೋಗ್ಯಕ್ಕೆ ಸಂಬಂಧಪಟ್ಟ ಕೇಂದ್ರಗಳಿಗೆ ನೀಡಿರುತ್ತಾರೆ. ಇನ್ನು ಜನ ಔಷಧಿ ಕೇಂದ್ರದಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಔಷಧಿ ಪಡೆಯಬಹುದು ಎಂದು ತಿಳಿಸಿದರು.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply