Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಬೇಳೂರು ನಿವಾಸಿ ಶ್ರೇಯಾ ಶಾನುಭಾಗ್ಕೋಟದಲ್ಲಿ ಅಪಘಾತಕ್ಕೆ ಯುವತಿ ಬಲಿ

ಕೋಟ: ಕೋಟದ ರಾಷ್ಟ್ರೀಯ ಹೆದ್ದಾರಿ ಕೃಷ್ಣಭವನ ಹೋಟೆಲ್ ಎದುರುಗಡೆ ಶನಿವಾರ ದ್ವಿಚಕ್ರ ವಾಹನಕ್ಕೆ ಫಾರ್ಚುನರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಬೇಳೂರು ನಿವಾಸಿ ಶ್ರೇಯಾ ಶಾನುಭಾಗ್ (24) ಮೃತಪಟ್ಟಿದ್ದು, ಆಕೆಯ ಸ್ನೇಹಿತೆ ಉಜಿರೆ ಮೂಲದ ಕುಂದಾಪುರ ಕೋಡಿಯ ಪ್ರಜ್ಞಾ (25)ಸ್ಥಿತಿ ಚಿಂತಾಜನಕವಾಗಿದೆ.​​

ಕುಂದಾಪುರದಿಂದ ಉಡುಪಿ ಕಡೆ ಸ್ಕೂಟಿಯಲ್ಲಿ ಇಬ್ಬರು ಯುವತಿಯರು ಸಾಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿಯಲ್ಲಿದ್ದ ಇಬ್ಬರೂ ಗಂಭೀರ ಗಾಯಗೊಂಡಿದ್ದು, ಶ್ರೇಯಾ ಉಡುಪಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಪ್ರಜ್ಞಾ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾಹನ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಸಂದರ್ಭ ಕೋಟದ ಜೀವನ್ ಮಿತ್ರ ಆಂಬುಲೆನ್ಸ್ ಮಾಲಿಕ ನಾಗರಾಜ್ ಪುತ್ರನ್ ಸಾಸ್ತಾನ ಟೋಲ್ ಬಳಿ ತಡೆದು ಕೋಟ ಆರಕ್ಷಕ ಠಾಣೆಗೆ ಒಪ್ಪಿಸಿದ್ದಾರೆ. ಅದೇ ಜೀವನ್ ಮಿತ್ರ ಆಂಬುಲೆನ್ಸ್ ಮೂಲಕ ಉಡುಪಿ ಹಾಗೂ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ಕೊಂಡ್ಯೊಯ್ಯಲಾಯಿತು. ಕೋಟ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!