ಅಕ್ರಮ ಗಣಿಗಾರಿಕೆ: ಸೆರೆ ಹಿಡಿಯಲು ಹೋದ ಡಿಸಿಪಿಯ ಮೇಲೆ ಟ್ರಕ್​ ಹರಿಸಿ ಭೀಕರ ಹತ್ಯೆ

ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರನ್ನ ಸೆರೆ ಹಿಡಿಯುಯಲು ಹೋದ ಹಿರಿಯ ಪೊಲೀಸ್​ ಅಧಿಕಾರಿ ಮೇಲೆ ಟ್ರಕ್​ ಹರಿಸಿ ಭೀಕರ ಹತ್ಯೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

ಸುರೇಂದ್ರ ಸಿಂಗ್​​ ಗಣಿ ಬಲಿಯಾದ ಹಿರಿಯ ಪೊಲೀಸ್​ ಅಧಿಕಾರಿ.
ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಖಚಿತ ಮಾಹಿತಿ ಪಡೆದಿದ್ದ ಸುರೇಂದ್ರ ಸಿಂಗ್​ ತನ್ನ ತಂಡದೊಂದಿಗೆ ಇಂದು ಬೆಳಗ್ಗೆ 11.30ಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆ ಕ್ಷಣ ದಾರಿಯಲ್ಲಿ ನಿಂತಿದ ಸುರೇಂದ್ರ ಸಿಂಗ್​ ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಟ್ರಕ್​ ಚಾಲಕ ಆತನ ಮೇಲೆ ಟ್ರಕ್​ ಹರಿಸಿದ್ದರಿಂದ ಪೊಲೀಸ್​ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ರಸ್ತೆಯಿಂದ ಪಕ್ಕಕ್ಕೆ ಜಿಗಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್ ಆರೋಪಿಗಳನ್ನು ಪತ್ತೆ ಹಚ್ಚಲು ಆದೇಶಿಸಿದ್ದು, ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಪೊಲೀಸ್ ಅಧಿಕಾರಿ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ.

Leave a Reply