ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಅದ್ದೂರಿಯಾಗಿ ಆಚರಿಸಲು ನಿರ್ಧಾರ

ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಮೈಸೂರು ದಸರಾವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 ಮೈಸೂರು ದಸರಾ ಮಹೋತ್ಸವ 2022ರ ಉನ್ನತ ಮಟ್ಟದ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ‌ ಮಾತನಾಡಿದ ಸಿಎಂ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಈ ಬಾರಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 26ರಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ. ಅಕ್ಟೋಬರ್ 5ರಂದು ವಿಜಯದಶಮಿಯಂದು ಜಂಬೂಸವಾರಿ ಮೆರವಣಿಗೆ ನಡೆಯಲಿದೆ ಎಂದರು. 

ವಸ್ತು ಪ್ರದಶನ ಹದಿನೈದು ದಿನ ಮೊದಲು ಪ್ರಾರಂಭ ಮಾಡ್ತೇವೆ. ಈ ಬಾರಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಒತ್ತು ನೀಡಲಿದ್ದೇವೆ. ದಿನಕ್ಕೆ ಒಬ್ಬರು ರಾಷ್ಟ್ರೀಯ ಮಟ್ಟದ ಕಲಾಕಾರರನ್ನು ಕರೆಯುತ್ತೇವೆ. ಶ್ರೀರಂಗಪಟ್ಟಣ, ಚಾಮರಾಜನಗರದಲ್ಲೂ ವೈಭೋವಪೂರಿತವಾಗಿ ದಸರಾ ಮಾಡಲು ತೀರ್ಮಾನಿಸಿದ್ದೇವೆ.‌ ಅನ್ಯ ರಾಜ್ಯಗಳಲ್ಲೂ ದಸರಾ ಸಂಬಂಧ ಪ್ರಚಾರ ಮಾಡಲು ಸೂಚನೆ ನೀಡಲಾಗಿದೆ ಎಂದು ಸಿಎಂ ವಿವರಿಸಿದರು.

ಮೈಸೂರು ಮತ್ತು ಹಂಪಿ ಟೂರಿಸಂ ಸರ್ಕ್ಯಿಟ್​​ಗೆ ಆದೇಶ ಹೊರಡಿಸಲಾಗುವುದು. ಅದರಂತೆ ಒಂದೇ ಟಿಕೆಟ್​​ನಲ್ಲಿ ಹಂಪಿ ಮತ್ತು ಮೈಸೂರು ನೋಡಬಹುದು. ವಿದೇಶದಿಂದ ಟಿಕೆಟ್ ಬುಕ್ ಮಾಡೋರಿಗೆ ಹೊರಗಡೆಯಿಂದ ಬರೋರಿಗೆ ಅನುಕೂಲ ಮಾಡಿಕೊಡಲಾಗುವುದು. 26 /9 ಕ್ಕೆ ದಸರಾ ಆರಂಭವಾದರೆ, 5/10 ಕ್ಕೆ ವಿಜಯದಶಮಿ, 5/10ಕ್ಕೆ ಧ್ವಜ ಪೂಜೆ, 5/10 ಕ್ಕೆ ನಂದಿ ಪೂಜೆ ನೆರವೇರಲಿದೆ. 7/8/22 ಕ್ಕೆ ಗಜಪಯಣ ,10/8/22 ಅರಮನೆಯ ಪ್ರವೇಶ , 7/10 ಕ್ಕೆ ಗಜಪಡೆ ನಿರ್ಗಮನವಾಗಲಿದೆ ಎಂದು ವಿವರಿಸಿದರು.

ಇನ್ನು ದಸರಾ ಹಬ್ಬಕ್ಕೆ 10 ಕೋಟಿ ರೂ. ಮುಡಾದಿಂದ ನೀಡಲಾಗುವುದು. ಉಳಿದಂತೆ ಸಿಎಸ್ ಆರ್ ಫಂಡ್ ಬಳಕೆಗೆ ಸೂಚನೆ ನೀಡಲಾಗಿದೆ. ಅರಮನೆ ಹೊರಗಡೆ ಹಬ್ಬ ಆಚರಣೆಗೆ ಎಷ್ಟು ವೆಚ್ಚ ಆಗುತ್ತೋ ಆ ಅನುದಾನವನ್ನು ಸರ್ಕಾರವೇ ಭರಿಸುತ್ತದೆ ಎಂದು ತಿಳಿಸಿದರು.

ಈ ವರ್ಷ ಮಳೆ ಬೆಳೆ ಆಗಿರುವುದರಿಂದ ಈ ವರ್ಷವೂ ದಸರಾವನ್ನು ಸಾಂಪ್ರದಾಯಿಕವಾಗಿ , ವೈಭವಪೂರಿತವಾಗಿ ಮಾಡಲು ಶಾಸಕರು ಅಭಿಮತ ವ್ಯಕ್ತಪಡಿಸಿದ್ದಾರೆ. ದಸರಾ ಹಬ್ಬದ ಮೂರು ತಿಂಗಳು ಅಧಿಕಾರಿಗಳು ಕೈಗೆ ಸಿಗಲ್ಲ ಎಂದು ಜನಪ್ರತಿನಿಧಿಗಳು ದೂರು ನೀಡಿದ್ದಾರೆ. ಈ ಹಿನ್ನೆಲೆ ದಸರಾ ಸಂದರ್ಭ ಸಾರ್ವಜನಿಕರ ಕೆಲಸಕ್ಕೆ ಯಾವುದೇ ಸಮಸ್ಯೆ ಆಗಬಾರದು ಎಂದು ಸಿಎಂ ಡಿಸಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ದಸರಾ ನೆಪದಲ್ಲಿ ಸಾರ್ವಜನಿಕರ ಕೆಲಸಕ್ಕೆ ಸಮಸ್ಯೆ ಆಗಬಾರದು ಎಂದು ಸಿಎಂ ಡಿಸಿಗಳಿಗೆ ಸೂಚನೆ ನೀಡಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿ ಲೈಟಿಂಗ್ ಮಾಡಲು ತೀರ್ಮಾನಿಸಲಾಗಿದೆ. ದಸರಾ ಉದ್ಘಾಟಕರನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಿಎಂಗೆ ನೀಡಲಾಗಿದೆ ಎಂದರು.

ಸಭೆಯಲ್ಲಿ ಮೈಸೂರು, ಮಂಡ್ಯ ಭಾಗದ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಜಿಟಿ ದೇವೇಗೌಡ, ಪ್ರತಾಪ್ ಸಿಂಹ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ತನ್ವೀರ್ ಸೇಠ್, ಸಾರಾ ಮಹೇಶ್, ಹರ್ಷವರ್ಧನ್, ರಾಮ್ ದಾಸ್, ಪರಿಷತ್ ಸದಸ್ಯ ವಿಶ್ವನಾಥ್, ಮೈಸೂರು ಜಿಲ್ಲಾಧಿಕಾರಿ ಗೌತಮ್‌ ಬಗಾದಿ, ಮೈಸೂರು ಪೊಲೀಸ್ ಕಮಿಷನರ್, ಮಂಡ್ಯ ಜಿಲ್ಲಾಧಿಕಾರಿ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದರು.

 
 
 
 
 
 
 
 
 
 
 

Leave a Reply