ಉಡುಪಿ : ವಿಶ್ವ ಸ್ತನ ಪಾನ ಜಾಗೃತಿ ಸಪ್ತಾಹದ ಅಂಗವಾಗಿ ವಿಶೇಷ ಉಪನ್ಯಾಸ

 ಡುಪಿ : ರೋಟರಿ ಕ್ಲಬ್ ಮಣಿಪಾಲ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಸ್ತನ ಪಾನ ಜಾಗೃತಿ ಸಪ್ತಾಹದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ವೆಬಿನಾರ್ ಮೂಲಕ ನಡೆಯಿತು.

ಕೆ.ಎಂ.ಸಿ ಮಣಿಪಾಲದ ಮಕ್ಕಳ ಆರೋಗ್ಯ ವಿಭಾಗದ ಡಾ.ಸುನಿಲ್ ಮುಂಡ್ಕೂರು ಉಪನ್ಯಾಸ ನೀಡಿದರು. ಮಕ್ಕಳ ಆರೋಗ್ಯದ, ಸ್ತನ ಪಾನದ ಮಹತ್ವದ ಕುರಿತು ತೆಗೆದುಕೊಳ್ಳಬೇಕಾದ ನಿಯಮಗಳ ಕುರಿತು.ಮಾತನಾಡಿದರು.

ಮುಖ್ಯ ಅತಿಥಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಷಪ್ಪ, ಸಿ,ಡಿ.ಪಿ ಒ ವೀಣಾ ಮತ್ತು ರೋಟರಿ ಜಿಲ್ಲೆ 3182 ನಿಯೋಜಿತ ಗವರ್ನರ್ ಡಾ. ಗೌರಿ,ರೋಟರಿ ಭಾಗವಹಿಸಿದ್ದರು. ಜಿಲ್ಲೆಯಾದ್ಯಂತ 800 ಕ್ಕೂ ಹೆಚ್ಚಿನ ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದು ಸ್ತನ ಪಾನದ ಕುರಿತಾದ ಸಂಶಯಗಳನ್ನು ನಿವಾರಿಸಿಕೊಂಡರು. ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷ ಡಾ ವಿರೂಪಾಕ್ಷ ದೇವರಮನೆ ಸ್ವಾಗತಿಸಿದರು. ಶೈಲಾ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು

 
 
 
 
 
 
 
 
 
 
 

Leave a Reply