ಉಡುಪಿ ಚೈಲ್ಡ್ ಲೈನ್ ವತಿಯಿಂದ ಮಕ್ಕಳ ವಿವಿಧ ಕಾನೂನುಗಳ ಮಾಹಿತಿ ಕಾರ್ಯಗಾರ

ಉಡುಪಿ : ಚೈಲ್ಡ್ ಲೈನ್ 1098 ಉಡುಪಿ ವತಿಯಿಂದ ಮಕ್ಕಳ ಹಕ್ಕುಗಳ ರಕ್ಷಣಾ ಪಡೆ ಹಾಗೂ ಮಕ್ಕಳಿಗೆ ಸಂಬಧಿಸಿದ ವಿವಿಧ ಕಾನೂನುಗಳ ಬಗ್ಗೆ ಮಾಹಿತಿ ಕಾರ್ಯಗಾರ ಉಡುಪಿ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಚೈಲ್ಡ್ ಲೈನ್ -1098 ನಿರ್ದೇಶಕ ರಾಮಚಂದ್ರ ಉಪಾಧ್ಯಾಯ, ಉಡುಪಿ ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಿರಣ್ ಫಡ್ನೇಕರ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಾಗಾರದ ಅವಶ್ಯಕತೆ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಬಿ. ನಾಗರಾಜ್, ಮಾಜಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಮಕ್ಕಳ ಕಾನೂನು ಕಾಯಿದೆಗಳ ಬಗ್ಗೆ ಮಾಹಿತಿ ನೀಡಿದರು.ಬಾಲನ್ಯಾಯ ಕಾಯ್ದೆ, ಪೌಷ್ಠಿಕ ಆಹಾರ ನಿಯಂತ್ರಣ ನಿಯಮ ಕಾಯಿದೆ 1992, ಜನನ-ಮರಣ ನೊಂದಾಣಿ ಕಾಯಿದೆ 1969, ಬಾಲಕಾರ್ಮಿಕ ನಿಷೇಧ ಕಾಯಿದೆ, ಬಾಲ್ಯವಿವಾಹ ನೀಷೇಧ ಕಾಯಿದೆ, ದತ್ತು ಸ್ವೀಕಾರದ ಬಗ್ಗೆ ಇರುವ ಕಾನೂನು ನಿಯಮಗಳ ಬಗ್ಗೆ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಜಯಂತ ರಾವ್, ತರಬೇತುದಾರರು, ಮಕ್ಕಳ ಹಕ್ಕುಗಳ ರಚನೆಯ ಇತಿಹಾಸವನ್ನು ತಿಳಿಸಿ, ಮಕ್ಕಳ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಹೊಂದುವ ಹಕ್ಕು, ಭಾಗವಹಿಸುವ ಹಕ್ಕುಗಳ ಕುರಿತು ಮಾಹಿತಿ ನೀಡಿದರು.ಮಕ್ಕಳ ಮೇಲೆ ಇಡಬೇಕಾದ ಕಾಳಜಿ, ಜವಬ್ದಾರಿಗಳ ಬಗ್ಗೆ ತಿಳಿಸಿದರು. ಜ್ಯೋತಿ, ಆಪ್ತ ಸಮಾಲೋಚಕರು, ಚೈಲ್ಡ್ ಲೈನ್-1098 ಉಡುಪಿ, ಚೈಲ್ಡ್ ಲೈನ್-1098 ರ ಕಾರ್ಯವೈಖರಿಯ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

ಮೋಹನ್ ರಾಜ್, ಕಾರ್ಯನಿರ್ವಹಣಾಧಿಕಾರಿ ತಾಲೂಕು ಪಂಚಾಯತ್ ಉಡುಪಿ,ಕುಮಾರ್ ನಾಯ್ಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾಮಕ್ಕಳ ರಕ್ಷಣಾ ಘಟಕ, ಉಡುಪಿ. ಉಡುಪಿ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಚೈಲ್ಡ್ ಲೈನ್-1098 ರ ಸಹನಿರ್ದೇಶಕರು, ಚೈಲ್ಡ್ ಲೈನ್ ಸಿಬ್ಬಂದಿಗಳು, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚೈಲ್ಡ್ ಲೈನ್ ಉಡುಪಿಯ ಸಿಬ್ಬಂದಿ ಪ್ರಮೋದ್ ನಿರೂಪಿಸಿ, ಚೈಲ್ಡ್ ಲೈನ್ ಉಡುಪಿಯ ಕೇಂದ್ರ ಸಂಯೋಜಕಿ ಕಸ್ತೂರಿ ವಂದಿಸಿದರು.

 
 
 
 
 
 
 
 
 
 
 

Leave a Reply