ಕರ್ನಾಟಕದ ಮೊದಲ ವಿಂಚ್ ಪ್ಯಾರಾಸೈಲಿಂಗ್ ಬೋಟ್ ಗೆ ಮಲ್ಪೆಯಲ್ಲಿ ಚಾಲನೆ

ಉಡುಪಿ: ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮಲ್ಪೆ ಬೀಚ್ ನಲ್ಲಿ ವಿಂಚ್ ಪ್ಯಾರಸೈಲಿಂಗ್ ಬೋಟ್ ಗೆ ಉಡುಪಿ ಶಾಸಕ ರಘುಪತಿ ಭಟ್ ಶನಿವಾರ ಚಾಲನೆ ನೀಡಿದರು

ಚಾಲನೆ ನೀಡಿ ಮಾತನಾಡಿದ ಶಾಸಕರು, ಕೊರೋನಾದಿಂದ ಕಳೆದ ಹಲವಾರು ತಿಂಗಳುಗಳಿಂದ ಮಲ್ಪೆ ಬೀಚ್ ಪ್ರವಾಸೋದ್ಯಮ ಸ್ಥಬ್ದ ವಾಗಿತ್ತು. ಸದ್ಯ ಈಗಷ್ಟೇ ಮೆರುಗು ಪಡೆಯುತ್ತಿದೆ. ಮಲ್ಪೆ ಬೀಚ್ ಪ್ರವಾಸೋದ್ಯಮಕ್ಕೆ ವಿಂಚ್ ಪ್ಯಾರಾಸೈಲಿಂಗ್ ಹೊಸದಾಗಿ ಸೇರ್ಪಡೆಗೊಂಡಿರುವುದರಿಂದ ಗೋವಾ ಹಾಗೂ ಇತರ ಕಡೆ ಹೋಗುವ ಪ್ರವಾಸಿಗರನ್ನು ಮಲ್ಪೆಯತ್ತ ಆಕರ್ಷಿಸಲು ಸಾಧ್ಯವಾಗಲಿದೆ.

ಬೀಚ್ ಗಳು ಅಭಿವೃದ್ದಿ ಹೊಂದಬೇಕಾದರೆ ಸ್ಥಳೀಯರಿಂದ ಸೂಕ್ತ ಸಹಕಾರ ಸಿಗಬೇಕು. ಈ ನಿಟ್ಟಿನಲ್ಲಿ ಮಲ್ಪೆ ಪರಿಸರದ ಸ್ಥಳೀಯರು ನೀಡಿದ ಸಹಕಾರ ಅಪಾರವಾಗಿದೆ ಎಂದು ಹೇಳಿದರು. ಮಲ್ಪೆ ಬೀಚ್ ಗೆ ಸೀಮಿತ ವಾಗಿರುವ ಪ್ರವಾಸೋದ್ಯಮವನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ ಈ ನೀಟ್ಟಿನಲ್ಲಿ ಪಕ್ಕದ ಪಡುಕೆರೆ ಬೀಚ್ ನಲ್ಲಿ ಕೂಡ ವಾಟರ್ ಸ್ಪೋರ್ಟ್ಸ್ ಗೆ ವಿಪುಲ ಅವಕಾಶವಿದ್ದು ಸ್ಥಳೀಯ ಯುವಕರು ಇದರ ಬಗ್ಗೆ ಗಮನ ಹರಿಸಿದ್ದಲ್ಲಿ ಅವರಿಗೂ ಕೂಡ ಉದ್ಯೋಗದ ಅವಕಾಶ ಲಭಿಸಿದಂತಾಗುತ್ತದೆ ಎಂದರು.ಕೇಂದ್ರ ಸರ್ಕಾರ ಸಿ ಆರ್ ಝಡ್ ಕಾಯಿದೆ ತಿದ್ದುಪಡಿ ತಂದಿದ್ದು ಬೀಚ್ ಭಾಗದ ಮೀನುಗಾರ ಕುಟುಂಬದವರು ತಮ್ಮ ಮನೆಗಳಲ್ಲಿ ರೆಸಾರ್ಟ್ ನಿರ್ಮಿಸದರೆ, ಅದು ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಿದೆ ಇದರ ಬಗ್ಗೆ ಇನ್ನಷ್ಟು ಆಸಕ್ತಿ ವಹಿಸಬೇಕು ಎಂದರು.

ಇನ್ನು ಸಣ್ಣ ನೀರಾವರಿ ಇಲಾಖೆಯಿಂದ ಈಗಾಗಲೇ ಪಡುಕೆರೆ ಬಳಿ ವಾಕಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ರೂ 20 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಅದರೊಂದಿಗೆ ಮಲ್ಪೆ ಸೀ ವಾಕ್ ಭಾಗದಿಂದ ಪಡುಕೆರೆಗೆ ನೇರ ಸಂಚಾರ ವ್ಯವಸ್ಥೆಯ ಉದ್ದೇಶದಲ್ಲಿ ತೂಗು ಸೇತುವೆ ಅಥವಾ ಕೇಬಲ್ ಕಾರ್ ನಿರ್ಮಾಣದ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.

ವಿಂಚ್ ಪ್ಯಾರಾಸೈಲಿಂಗ್ ನಲ್ಲಿ ಸಮುದ್ರದ ನಡುವೆ ಬೋಟ್ ಮೇಲಿಂದಲೇ ಹಾರಾಟ ನಡೆಸಿ ಬೋಟ್ ನಲ್ಲೇ ಲ್ಯಾಂಡ್ ಆಗಬಹುದು. ಗೋವಾ ಮಹಾರಾಷ್ಟ್ರದ ಮಾಲ್ವನ್ ಮತ್ತು ಥೈಲ್ಯಾಂಡ್ ನಲ್ಲಿ ಈಗಾಗಲೇ ಇದು ಜನಪ್ರಿಯಗೊಂಡಿದೆ. ವಿಂಚ್ ಪ್ಯಾರಾ ಸೈಲಿಂಗ್ ನಲ್ಲಿ ಪ್ರವಾಸಿಗರಿಗೆ ಬೋಟ್ ರೈಡಿಂಗ್ ಮತ್ತು ಹಾರಾಟ ಎರಡೂ ಒಂದರಲ್ಲೇ ದೊರಕುತ್ತದೆ.

 ಬೋಟ್ನಲ್ಲಿ 15 ಮಂದಿಗೆ ತೆರಳಲು ಅವಕಾಶವಿದ್ದು ಎರಡು ಅಥವಾ ಮೂರು ಮಂದಿ ಮೇಲೆ ಹಾರಾಟ ನಡೆಸ ಬಹುದಾಗಿದೆ. 350ಅಶ್ವಶಕ್ತಿಯುಳ್ಳ ಬೋಟ್ ಹೈಸ್ಪಿಡ್ನಲ್ಲಿ ಚಲಿಸಿ, ಸುಮಾರು 100 ಮೀಟರ್ ಎತ್ತರದಲ್ಲಿ 90 ಡಿಗ್ರಿ ಮೇಲೆ ಕೊಂಡೊಯ್ಯುತ್ತದೆ. ಅರ್ಧ ನೀರಿನಲ್ಲೂ ಡಿಪ್ ಮಾಡುವಾಗ ಸಮುದ್ರದಲ್ಲಿ ಈಜುತ್ತಾ ಸಾಗುವ ಅನುಭವ ಸಿಗಲಿದೆ.ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ, ನಗರಸಭಾಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಲ್ಪೆ ಸೆಂಟ್ರಲ್ ವಾರ್ಡಿನ ನಗರಸಭಾ ಸದಸ್ಯ ಎಡ್ಲಿನ್ ಕರ್ಕಡ, ಕೊಡವೂರು ವಾರ್ಡಿನ ವಿಜಯ ಕೊಡವೂರು, ಕಲ್ಮಾಡಿ ವಾರ್ಡಿನ ಸುಂದರ್ ಜೆ ಕಲ್ಮಾಡಿ, ಮಾಜಿ ನಗರಸಭಾ ಸದಸ್ಯರಾದ ಪಾಂಡುರಂಗ ಮಲ್ಪೆ, ವಿಜಯ ಕುಂದರ್, ಹಿಂದೂ ಯುವ ಸೇನೆ ಜಿಲ್ಲಾಧ್ಯಕ್ಷ ಮಂಜು ಕೊಳ, ಮಲ್ಪೆ ಬೀಚ್ ನಿರ್ವಾಹಕರಾದ ಸುದೇಶ್ ಶೆಟ್ಟಿ.

ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷರು ವಿನಯ ಕರ್ಕೆರಾ, ಜ್ಞಾನಜ್ಯೋತಿ ಭಜನ ಮಂದಿರದ ಅಧ್ಯಕ್ಷ ವಿಜಯ ತಿಂಗಳಾಯ, ಶಿವಪಂಚಾಕ್ಷರಿ ಭಜನ ಮಂದಿರದ ಅಧ್ಯಕ್ಷ ಶಂಕರ್ ಸುವರ್ಣ, ಮಲ್ಪೆ ಹನುಮಾನ್ ವಿಠೋಭ ಭಜನ ಮಂದಿರದ ಅಧ್ಯಕ್ಷ ರವಿ ಕರ್ಕೇರ, ತೊಟ್ಟಂ ಪಂಡರೀನಾಥ ಭಕ್ತಿ ಉದಯ ಭಜನ ಮಂದಿರದ ಅಧ್ಯಕ್ಷ ಸುಭಾಷ್ ಸಾಲ್ಯಾನ್, ಕೊಳ ಬಾಲಕರ ರಾಮ ಭಜನ ಮಂದಿರದ ಅಧ್ಯಕ್ಷ ಉದಯ ಕುಂದರ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಶರತ್ ಬೈಲಕೆರೆ, ಮಲ್ಪೆ ಠಾಣೆಯ ಉಪ ನೀರಿಕ್ಷಕರಾದ ತಿಮ್ಮೇಶ್ ಬಿ ಎನ್, ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ನ ಸನತ್ ಸಾಲ್ಯಾನ್, ನೀಲಾಧರ ಕೋಟ್ಯಾನ್, ನಾರಾಯಣ ಕರ್ಕೇರಾ, ರವೀಂದ್ರ ಶಿರಿಯಾನ್ ಉಪಸ್ಥಿತರಿದ್ದರು. ಯತೀಶ್ ಸ್ವಾಗತಿಸಿದರು.

 
 
 
 
 
 
 
 
 
 
 

Leave a Reply