ಕಾಮದೇನು ಗೋ ಸೇವಾಸಮಿತಿ ಮಂದಾರ್ತಿ ನೇತ್ರತ್ವದಲ್ಲಿ ಗೋವಿಗಾಗಿ ಮೇವು ಅಭಿಯಾನ

ಉಡುಪಿ :- ಕಾಮದೇನು ಗೋಸೇವಾಸಮಿತಿ ಮಂದಾರ್ತಿ ನೇತ್ರತ್ವದಲ್ಲಿ ಅನಾಥ ಗೋವುಗಳ ಸಂರಕ್ಷಣೆ ಮಾಡುತ್ತಿರುವ ಗೋಶಾಲೆಗಳಿಗೆ ಮೇವನ್ನು ನೀಡುವ ಗೋವಿಗಾಗಿ ಮೇವು ಅಭಿಯಾನ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದು ಗೋಪೂಜಾ ದಿನವಾದ ಇಂದು ಪೇಜಾವರ ವಿಶ್ವಪ್ರಸನ್ನ ತೀರ್ಥರುಗೋಪೂಜೆ ಮಾಡಿ ಒಣಹುಲ್ಲು ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಶ್ರೀಪಾದರು ಉಡುಪಿ ಜಿಲ್ಲೆಯಲ್ಲಿ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಯವರ ನೇತ್ರತ್ವದಲ್ಲಿ ಆರಂಭಗೊಂಡ ಗೋವಿಗಾಗಿ ಮೇವು ಅಭಿಯಾನ ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲೂ ಯಶಸ್ವಿಯಾಗಿರುವುದು ಹೆಮ್ಮೆಯ ವಿಚಾರ ಎಂದರು ಹಾಗೇಯೇ ಒಣಹುಲ್ಲು ಅಭಿಯಾನ ಇಂದಿನಿಂದ ಆರಂಭಗೊಂಡಿದ್ದು ಜಿಲ್ಲೆಯ ಎಲ್ಲಾ ಸಂಘಟನೆಗಳು ಭಾಗವಹಿಸಿ ಗೋಪಾಲಕ್ರಷ್ಣನ ಅನುಗ್ರಹಕ್ಕೆ ಪಾತ್ರರಾಗಿ ಎಂದರು, ಈ ದಿನದ ಪ್ರಥಮ ಸೇವೆಯಾಗಿ ಉಡುಪಿ ಶಾಸಕಾರದ ರಘುಪತಿ ಭಟ್ ಅವರು ಗೌರವ ಅದ್ಯಕ್ಷರಾಗಿರುವ ಕರಂಬಳ್ಳಿ ಪ್ರೆಂಡ್ಸ್ ತಾವೇ ಹಡಿಲು ಬಿದ್ದ ಭೂಮಿಯಲ್ಲಿ ಬೆಳೆದ ಒಣಹುಲ್ಲನ್ನು ಶ್ರೀಗಳಿಗೆ ಹಸ್ತಾಂತರಿಸಿದರು. 

ಈ ಸಂದರ್ಭದಲ್ಲಿ ಗೋವಿಗಾಗಿ ಮೇವು ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಉಡುಪಿ ನಗರಸಭಾ ಸದಸ್ಯ ಗಿರಿಧರ್ ಆಚಾರ್ಯ ಕರಂಬಳ್ಳಿ, ಸಂಸ್ತೆಯ ಸ್ಥಾಪಕಾದ್ಯಕ್ಷರಾದ ಪ್ರಸನ್ನ ಶೆಟ್ಟಿ , ಅಂಕಣಕಾರ ರಾಘವೇಂದ್ರ ಪ್ರಭು ಕರ್ವಾಲ್, ಗೋವಿಗಾಗಿ ಮೇವು‌ ಅಬಿಯಾನದ ಉಲ್ಲಾಸ್ ಅಮೀನ್ ಕೂರಾಡಿ, ಪವನ್ ಶೆಟ್ಟಿ ಐರೋಡಿ ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply