ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಪ್ರಯುಕ್ತ ಇ. ಶ್ರಮ್ ಕಾರ್ಡ್ ವಿತರಣೆ ಕಾರ್ಯಕ್ರಮ

ಉಡುಪಿ : ಮೋದಿ ಬ್ರಿಗೇಡ್ ಉಡುಪಿ ಜಿಲ್ಲಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಪ್ರಯುಕ್ತ ಇ. ಶ್ರಮ್ ಕಾರ್ಡ್ ವಿತರಣೆ ಕಾರ್ಯಕ್ರಮ ಅಸಂಘಟಿತ ಕಾರ್ಮಿಕರಿಂದ ಉದ್ಘಾಟಿಸಲಾಯಿತು.

ಬೆಳಿಗ್ಗೆ 8 ಗಂಟೆಗೆ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಸರ್ವಲಂಕಾರ ಪೂಜೆ ನಂತರ 10:30 ಗೆ ಎ. ಪಿ. ಎಂ ಸಿ ಆವರಣದಲ್ಲಿ ಅಸಂಘಟಿತ ಕಾರ್ಮಿಕರಿಗೆ ಇ. ಶ್ರಮ್ ಕಾರ್ಡ್ ವಿತರಿಸಯಿತು. ತದನಂತರ ಅಪ್ಪ, ಅಮ್ಮ ವೃದ್ಧ ಆಶ್ರಮಕ್ಕೆ ಭೇಟಿ ನೀಡಿ ಭೋಜನದ ನಂತರ ಸ್ಪಂದನ ಬುದ್ಧಿಮಾಂದ್ಯ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು. 

ರಾಜ್ಯ ಪ್ರಧಾನ ಕಾರ್ಯದರ್ಶಿ ನೀತಾ ಪ್ರಭು ಮೋದಿಜಿ ಜನ್ಮ ದಿನದ ಬಗ್ಗೆ ಮಾತನಾಡಿ ಜಿಲ್ಲಾಧ್ಯಕ್ಷ ಸುಭಾಷಿತ್ ಕುಮಾರ್ ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಗಣೇಶ್ ಪಾಟೀಲ್ ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply