ವಿಕಲ ಚೇತನ ಮಕ್ಕಳಿಗೆ ಅನ್ನ ದಾಸೋಹ ಮತ್ತು ಸಸಿ ನೆಡುವ ಕಾರ್ಯಕ್ರಮ

ಉಡುಪಿ : ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮ ದಿನ ಪ್ರಯುಕ್ತ ಶುಕ್ರವಾರ ಸೇವೆ ಮತ್ತು ಸಮರ್ಪಣ ಅಭಿಯಾನದ ಅಂಗವಾಗಿ ವಿಕಲ ಚೇತನ ಮಕ್ಕಳಿಗೆ ಅನ್ನ ದಾಸೋಹ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಸ್ಪಂದನ ವಿಕಲ ಚೇತನ ಮಕ್ಕಳ ಶಾಲೆ ಉಪ್ಪೂರಿನಲ್ಲಿ ನಡೆಯಿತು. 

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ದೇಶದ ಜನತೆಗೆ ಮೋದಿಯವರು ನೀಡಿದ ಜನಪರ ಕಾರ್ಯಕ್ರಮಗಳನ್ನು ವಿವರಿಸಿದರು ಹಾಗೂ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು. 

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಕುತ್ಯಾರ್ ನವೀನ್ ಶೆಟ್ಟಿ, ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ರೈತ ಮೋರ್ಚಾ ಅಧಕ್ಷರಾದ ಪ್ರವೀಣ್ ಗುರ್ಮೆ, ಬಿಜೆಪಿ ಜಿಲ್ಲಾ ನಾಯಕ ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕೊಡ್ಗಿ, ಗೀತಾಂಜಲಿ ಸುವರ್ಣ, ರಾಜ್ಯ ರೈತ ಮೋರ್ಚಾ ಸದಸ್ಯ ರಾಘವೇಂದ್ರ ಉಪ್ಪೂರು, ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಧೀರಜ್ ಕೆ. ಎಸ್ ಮತ್ತು ಗೋಪಾಲ್ ಕಾಂಚನ್ ಉಪಾಧ್ಯಕ್ಷ ಅಶೋಕ್ ಶೆಟ್ಟಿ, ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯಕ್, ಉಡುಪಿ ಗ್ರಾಮಾಂತರ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಉಪ್ಪೂರು, ಪ್ರಧಾನ ಕಾರ್ಯದರ್ಶಿ ರಮ್ಯ ಉಪ್ಪೂರು, ಸಂಸ್ಥೆಯ ಅಧ್ಯಕ್ಷ ಜನಾರ್ಧನ್, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣರಾಜ ಕೋಟ್ಯಾನ್, ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳು, ಸದಸ್ಯರು,ಗ್ರಾಮಾಂತರ ರೈತ ಮೋರ್ಚಾ ಸದಸ್ಯರು, ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಜನ ಪ್ರತಿನಿಧಿಗಳು, ಕಾರ್ಯಕರ್ತ ಬಂಧುಗಳು ಉಪಸ್ತಿತರಿದ್ದರು. ಈ ಕಾರ್ಯಕ್ರವನ್ನು ವೀಣಾ ನಾಯಕ್ ಸ್ವಾಗತಿಸಿ, ಧೀರಜ್ ಕೆ ಎಸ್ ನಿರೂಪಿಸಿದರು.

 

 
 
 
 
 
 
 
 
 

Leave a Reply