“ನಮ್ಮೂರ ಹೆಮ್ಮೆ” ಪಿಯು ಟಾಪರ್ ಅಭಿಜ್ಞಾ ರಾವ್ ಗೆ ಅಭಿನಂದನೆ

ಉಡುಪಿ: ದ್ವಿತೀಯ ಪಿ.ಯು ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಉಡುಪಿ ಜಿಲ್ಲೆಯ ವಿದ್ಯೋದಯ ಪಿ.ಯು ಕಾಲೇಜಿನ ಒಳಕಾಡು ನಿವಾಸಿ ಕುಮಾರಿ ಅಭಿಜ್ಞಾ ರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ) ಇದರ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಅವರ ಮನೆಗೆ ತೆರಳಿ “ನಮ್ಮೂರ ಹೆಮ್ಮೆ” ಎನ್ನುವ ಫಲಕ ನೀಡಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಅಲ್ಮೆಡ, ನಗರ ಸಭಾ ಸದಸ್ಯ ರಮೇಶ್ ಕಾಂಚನ್ ಮತ್ತು ವಿಜಯ ಪೂಜಾರಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಮಾಜಿ ನಗರ ಸಭಾ ಸದಸ್ಯ ಗಣೇಶ್ ನೆರ್ಗಿ, ಉದ್ಯಮಿ ಪ್ರಶಾಂತ್ ಜತ್ತನ್ನ, ಸಂಜಯ್ ಆಚಾರ್ಯ, ದೇವದಾಸ್ ನಾಯಕ್, ಪ್ರದೀಪ್ ಬೇಲಾಡಿ ಉಪಸ್ಥಿತರಿದ್ದರು.

Leave a Reply