ಸಮಾಜಕ್ಕೆ ಮಾದರಿ ಇತರ ವಿಕಲ ಚೇತನರಿಗೆ ಸಹಾಯ ಹಸ್ತ ಚಾಚಿದ ಕೊಡವೂರಿನ ಈ ದಿವ್ಯಾಂಗರು 

ಉಡುಪಿ: ಅಂಗವಿಲ್ಲದೆ ಸಮಾಜದಿಂದ ದೂರವಿದ್ದು ತಾವೇ ಕಷ್ಟಕರವಾದ ಬದುಕು ಸಾಗಿಸುತ್ತಿರುವ ಕೊಡವೂರು ಭಾಗದ ಅಂಗವಿಕಲರು, ತಮ್ಮದೆ ಅಂಗವಿಕಲರ ಸಮಿತಿಯನ್ನು ಮಾಡಿಕೊಂಡು ಊರಿನಲ್ಲಿರುವ ಅಂಗವಿಕಲರ ರಕ್ಷಣೆ ಮಾಡಬೇಕು,ಸರಕಾರದ ಸವಲತ್ತುಗಳು ಅಂಗವಿಕಲರಿಗೆ ತಿಳಿಸಬೇಕು ಮತ್ತು ಬಡವರಿಗೆ ಮನೆ ಕಟ್ಟಲು ಸಿಮೆಂಟ್, ಹೊಲಿಗೆ ಯಂತ್ರ, ಔಷಧಿಗೆ ಧನ ಸಹಾಯ, ವಿದ್ಯಾಭ್ಯಾಸಕ್ಕೆ ಧನ ಸಹಾಯ,ಮಾಡಿ ಊರಿನ ಆರೋಗ್ಯ ರಕ್ಷಣೆ ಮಾಡುವಂತಹ ಸಮಿತಿಯಾಗಿ ಬೆಳೆದಿರುವುದು ಸಂತೋಷದ ವಿಷಯ.

ಮುಂದಿನ ದಿನಗಳಲ್ಲಿ ಈ ಸಮಿತಿ ಮುಖಾಂತರ ಕೊಡವೂರು ವಾರ್ಡ್ ಮಾತ್ರವಲ್ಲದೆ ಹೊರ ಪ್ರದೇಶದ ಬಡವರಿಗೂ ಸಹಾಯ ಆಗುವಂತಹ ಕಾರ್ಯ ಮಾಡುವುದಾಗಿ ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಇದರ ಮಾರ್ಗದರ್ಶಕರಾದ ಮತ್ತು ಕೊಡವೂರು ವಾರ್ಡಿನ ನಗರ ಸಭಾ ಸದಸ್ಯರಾದ ಕೆ ವಿಜಯ್ ಕೊಡವೂರು ತಿಳಿಸಿದರು.

 ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ನಡೆದ ದುಡಿಯಲು ಸಾಧ್ಯವಿಲ್ಲದ ಅಂಗವಿಕಲರಿಗೆ ಅಕ್ಕಿ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಔಷಧಿಗೆ ಧನ ಸಹಾಯ ವಿತರಣೆ ಮಾಡಲಾಯಿತು. ನವ ದಂಪತಿಗಳಾದ ಶ್ರೀಮತಿ ಅಕ್ಷಯ ಭಗವಾನ್ ರಾಜ್ ಹರಿಹರ ನಗರ,ಮತ್ತು ಶ್ರೀಮತಿ ದೀಪಶ್ರೀ ಪ್ರಭಾತ್ ಕೊಡವೂರು, ಇವರುಗಳು ಮದುವೆಯ ಸಂದರ್ಭದ ನಿಮಿತ್ತ ದಿವ್ಯಾಂಗ ರಿಗೆ ಅಕ್ಕಿ, ಔಷಧಿಗೆ ಧನ ಸಹಾಯ ಮಾಡಿದರು.

 ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಶ್ರೀಮತಿ ರತ್ನ ಸುವರ್ಣ, ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷರಾದ ಜಯ ಸಾಲ್ಯಾನ್,ಶ್ರೀಮತಿ ಅಕ್ಷಯ ಭಗವಾನ್ ರಾಜ್ ಹರಿಹರ ನಗರ,ಶ್ರೀಮತಿ ದೀಪಶ್ರೀ ಪ್ರಭಾತ್ ಕೋಟ್ಯಾನ್,ನಗರ ಸಭಾ ಸದಸ್ಯರಾದ ಕೆ ವಿಜಯ್ ಕೊಡವೂರು,ಹಾಗೂ ಅಜಿತ್ ಬನ್ನಂಜೆ,ಜಯ ಕಲ್ಮಾಡಿ,ಇನ್ನಿತರರು ಉಪಸ್ಥಿತರಿದ್ದರು.ಹರೀಶ್ ಕೊಪ್ಪಲ್ ತೋಟ ಎಲ್ಲರನ್ನು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

 
 
 
 
 
 
 
 
 
 
 

Leave a Reply