ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ

ಬಿಗ್ ಬಾಸ್ ಮೂಲಕ ಪ್ರಸಿದ್ಧಿ ಪಡೆದ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಗಡಿ ರಸ್ತೆಯ ಪ್ರಗತಿ ಲೇಔಟ್ ನಲ್ಲಿರುವ ವೃದ್ಧಾಶ್ರಮವೊಂದರಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಿಂದೊಮ್ಮೆ 2020ರ ಜುಲೈ ತಿಂಗಳಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಜಯಶ್ರೀ ರಾಮಯ್ಯ, ತಮ್ಮ ಫೇಸ್ ಬುಕ್ ನಲ್ಲಿ “ಖಿನ್ನತೆ ಮತ್ತು ಈ ಜಗತ್ತಿಗೆ ಗುಡ್ ಬೈ” ಎಂದು ಬರೆದುಕೊಳ್ಳುವ ಮೂಲಕ ಎಲ್ಲರಲ್ಲೂ ಆತಂಕ ಮೂಡಿಸಿತ್ತು, ಈ ಪೋಸ್ಟ್ ಹಾಕಿದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಜಯಶ್ರೀ ಕೂಡಲೇ ಆಸ್ಪತ್ರೆಗೆ ದಾಖಲಾದ ಬಳಿಕ ಮತ್ತೊಂದು ಬಾರಿ ದಯ ಮರಣ ದಯಪಾಲಿಸಿ ಎಂದು ಅಂಗಲಾಚಿಕೊಂಡಿದ್ದರು.

ಉಪ್ಪು ಹುಳಿ ಖಾರ ಮತ್ತು ಕನ್ನಡ್ ಗೊತ್ತಿಲ್ಲ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಈಕೆ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ.

 
 
 
 
 
 
 
 
 
 
 

Leave a Reply