ಪೌರಕಾರ್ಮಿಕರೇ ನೈಜ ಸ್ವಚ್ಛತೆಯ ರಾಯಬಾರಿಗಳು: ಕೆ.ರಾಘವೇಂದ್ರ ಕಿಣಿ.

ಉಡುಪಿ: ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಮೂಡು ಸಗ್ರಿವಾರ್ಡಿನ 8 ಜನ ಪೌರಕಾರ್ಮಿಕರಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ರಾಘವೇಂದ್ರ ಕಿಣಿ ಸನ್ಮಾನಿಸಿ ಗೌರವಧನ ನೀಡಲಾಯಿತು. ತದನಂತರ ಅವರು ಮಾತನಾಡುತ್ತಾ. “ಪೌರಕಾರ್ಮಿಕರು ನೈಜವಾದ  ಸ್ವಚ್ಛತೆಯ ರಾಯಭಾರಿಗಳು, ಇವರ ಅವಿರತ ಸೇವೆಯ ಫಲ ಉಡುಪಿ ಇಂದು ಸ್ವಚ್ಛತೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಿದೆ.  
ದೇಶದಲ್ಲೇ ಮೊದಲ ಬಾರಿಗೆ ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧ ಮಾಡಿದ ಡಾಕ್ಟರ್ ವಿ. ಎಸ್ .ಆಚಾರ್ಯ ನೇತೃತ್ವದ ಉಡುಪಿ ನಗರಸಭೆಯ ನಿರ್ಣಯ ರಾಷ್ಟ್ರಮಟ್ಟದಲ್ಲಿ ಕ್ರಾಂತಿಕಾರಿ ಹೆಜ್ಜೆ ಆಗಿತ್ತು.ಪೌರಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದುದು ಸಮಾಜದ ಮತ್ತು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. 
ಈ ಸಂದರ್ಭದಲ್ಲಿ ಮೂಡುಸಗ್ರಿ ವಾರ್ಡಿನ ನಗರಸಭಾ ಸದಸ್ಯರಾದ ಭಾರತೀ ಪ್ರಶಾಂತ್, ಉಡುಪಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕಿಶೋರ್ ಕುಮಾರ್ ಕರಂಬಳ್ಳಿ, ಸುಮಾ ನಾಯ್ಕ್, ಪೆರಂಪಳ್ಳಿ ಮಾಜಿ ನಗರಸಭಾ ಸದಸ್ಯ ಪ್ರಶಾಂತ್ ಭಟ್, ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಯ ಮಾಜಿ ಕೋಶಾಧಿಕಾರಿಗಳಾದ ಕೆ. ಚಂದ್ರಕಾಂತ್ ಭಕ್ತ, ಉಡುಪಿ ನಗರ ಯುವ ಮೋರ್ಚಾ ಉಪಾಧ್ಯಕ್ಷ ಮನೀಶ್ ಜತ್ತನ್, ಮೂಡುಸಗ್ರಿ ವಾರ್ಡಿನ ಬೂತ್ ಅಧ್ಯಕ್ಷರಾದ ಪ್ರಶಾಂತ್ ಅಮೀನ್, ಇನ್ನಿತರ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply