ಸಂಸ್ಕ್ರತಿ ವಿಶ್ವ ಪ್ರತಿಷ್ಟಾನದ ವೈಬ್ ಸೈಟ್ ಲೋಕಾರ್ಪಣೆ…

ಆಧುನಿಕತೆಯತ್ತ ದಾಪುಗಾಲು ಹಾಕುತ್ತ ಎಲ್ಲವೂ ಡಿಜಿಟಲ್ ಮಯವಾಗುತ್ತಿರುವ ಈ ದಿನಗಳಲ್ಲಿ ವಿವಿಧ ರಂಗಗಳಲ್ಲಿ ತೊಡಗಿ ಕೊಂಡಿರುವ ಸಂಘ ಸಂಸ್ಥೆಗಳಿಗೆ ತಮ್ಮದೇ ಆದ ವೆಬ್ ಸೈಟ್ ನ ಅನಿವಾರ್ಯತೆ ಇದೆ ಎಂದು ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಎಂ.ಹರಿಶ್ಚಂದ್ರರವರು ಅಭಿಪ್ರಾಯ ಪಟ್ಟರು.

ಸಂಸ್ಕ್ರತಿ ವಿಶ್ವ ಪ್ರತಿಷ್ಟಾನ ( ರಿ.) ಉಡುಪಿಯ ವೆಬ್ ಸೈಟ್ ಉದ್ಘಾಟಿಸಿ ಮಾತನಾಡಿದ ಅವರು ಸಂಸ್ಥೆಯ ಕಾರ್ಯ ಕ್ರಮಗಳಿಗೆ ವೆಬ್ ಸೈಟ್ ಒಂದು ಮನೆಯಂತೆ. ಸಂಸ್ಕ್ರತಿ, ಸಂಸ್ಕಾರ, ಸಂಪ್ರದಾಯಗಳನ್ನು ವಿಶ್ವದೆಲ್ಲೆಡೆ ಪಸರಿಸುತ್ತಾ, ಹಲವಾರು ಹೊಸ ಹೊಸ ಪ್ರಯೋಗಗಳನ್ನು ನವೀನ ರೀತಿಯಲ್ಲಿ ಮಾಡಿ ರಂಗದಲ್ಲಿ ಪ್ರಯೋಗ ಶೀಲರಾಗಿ ಸಂಯೋಜಿ ಸುತ್ತಾ ಬಂದ ವಿವಿಧ ಪ್ರಯೋಗಗಳು ಸಂವಿಪ್ರ ಸಂಭ್ರಮದಲ್ಲಿ ಯಶಸ್ವಿಯಾಗಲಿ ಎಂದು ಸಂಸ್ಕ್ರತಿ ವಿಶ್ವ ಪ್ರತಿಷ್ಟಾನದ ಎಲ್ಲರಿಗೂ ಶುಭ ಹಾರೈಸಿದರು‌.ಹೀಗೊಂದು ರಂಗ ಕಲಿಕೆ,‌ ಯಾರೇ ನೀನು ಮೋಹನಾಂಗಿ ಯಕ್ಷ ನಾಟ್ಯ, ಕಥಾಸಪ್ತಾಹ ಮುಂತಾದ ವಿನೂತನ ಪರಿ ಕಲ್ಪನೆಗಳ ಬಗ್ಗೆ ಸಂಸ್ಥೆಯ ಸಂಚಾಲಕರಾದ ರವಿರಾಜ್ ಎಚ್ ಪಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಿವರ ನೀಡಿದರು. ಸ೦ವಿಪ್ರ ಸಂಭ್ರಮದ ಕುರಿತಾದ ಕಾರ್ಯಕ್ರಮಗಳ ಬಗ್ಗೆ ಪೂರ್ಣಿಮ ಜನಾರ್ಧನ್, ಪದ್ಮಾಸಿನಿ ಉದ್ಯಾವರ, ಮಂಜುಳಾ ಜನಾರ್ಧನ್ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷರಾದ ನಾಗರಾಜ್ ಹೆಬ್ಬಾರ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸಂಸ್ಕ್ರತಿ ವಿಶ್ವ ಪ್ರತಿಷ್ಟಾನದ ಯುವ ವೃಂದವನ್ನು ಆರಂಭಿಸಲಾಯಿತು. ಗೌರವಾಧ್ಯಕ್ಷರಾದ ವಿಶ್ವನಾಥ ಶೆಣೈಯವರು ಉಪಸ್ಥಿತರಿದ್ದರು. ಅಧ್ಯಕ್ಷ ಪ್ರೊ.ಶಂಕರ್ ಅಧ್ಯಕ್ಷೀಯ ಮಾತುಗಳನ್ನಾಡಿದರು. ಉಪಾಧ್ಯಕ್ಷರಾದ ಸಂಧ್ಯಾ ಶೆಣೈ, ವಿಘ್ನೇಶ್ವರ ಅಡಿಗ ಉಪಸ್ಥಿತರಿದ್ದರು. ಖಜಾಂಚಿ ರಾಜೇಶ್ ಪಣಿಯಾಡಿ ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply