ಆಭರಣ ಜ್ಯುವೆಲ್ಲರ್ಸ್ ವತಿಯಿಂದ 3 ವೆಂಟಿಲೇಟರ್ ಕೊಡುಗೆ

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವೆಂಟಿಲೇಟರ್ ಕೊರತೆಯಾಗದಂತೆ ದಾನಿಗಳಲ್ಲಿ ಶಾಸಕರು ಮನವಿ ಮಾಡಿರುವಂತೆ ಉಡುಪಿಯ ಆಭರಣ ಜ್ಯುವೆಲ್ಲರ್ಸ್ ಸಂಸ್ಥೆ  ಶಾಸಕ ಕೆ. ರಘುಪತಿ ಭಟ್ ಅವರ ಸಮ್ಮುಖದಲ್ಲಿ 3 ವೆಂಟಿಲೇಟರ್ ಜಿಲ್ಲಾಧಿಕಾರಿಯವರ ಮುಖಾಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ರೂ. 18 ಲಕ್ಷ  ವೆಚ್ಚದ 3 ವೆಂಟಿಲೆಟರ್ ಕೊಡುಗೆಯಾಗಿ ನೀಡಿದ ಆಭರಣ ಜ್ಯುವೆಲ್ಲರ್ಸ್ ಮಾಲಕರಾದ ಸುಭಾಸ್ ಎಂ.ಕಾಮತ್ ಹಾಗೂ ಮಹೇಶ್ ಎಂ.ಕಾಮತ್ ಅವರ ಸಾಮಾಜಿಕ ಕಳಕಳಿಗೆ ಶಾಸಕ ಕೆ. ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ. ಉಡುಪಿಯಲ್ಲಿ ಕೋರೋನಾ ಸೋಂಕಿತರ ಚಿಕಿತ್ಸೆಗೆ ದಾನಿಗಳು ಇಲ್ಲಿಯವರೆಗೆ 11 ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಿದ್ದು, ದಾನಿಗಳ ಸಾಮಾಜಿಕ ಕಳಕಳಿಗೆ ಶಾಸಕರು ಅಭಿನಂದಿಸಿದ್ದಾರೆ. ಈ  ಸಂದರ್ಭದಲ್ಲಿ ಆಭರಣ ಜ್ಯುವೆಲ್ಲರ್ಸ್ ಸಿ.ಇ.ಓ ಆಕರ್ಷ್ ಕಾಮತ್, ಅಕೌಂಟ್ ಮ್ಯಾನೇಜರ್ ವಿನೋದ್ ಕಾಮತ್, ಹಿರಿಯ ಸಿಬ್ಬಂದಿ ದಿನೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply