“ಶ್ರೀಶಿರೂರು ಶ್ರೀಗಳೊಂದಿಗಿನ ಮರೆಯಲಾಗದ ನೆನಪುಗಳು”~ಬರೆಹ: ಅಕ್ಷೋಭ್ಯ ಆಚಾರ್ಯ

ಒಮ್ಮೆ ನನ್ನ ಅಜ್ಜಿ ಕುಸುಮಕ್ಕನ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ  ಮಠದಲ್ಲೇ ಉಳಿದೆವು. ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಯಾರೋ ಮಠದವರೊಬ್ಬರು ಬೊಬ್ಬಿಡುತ್ತಾ ಬಂದು ನಮ್ಮ ಕೋಣೆಯ ಬಾಗಿಲನ್ನು ಜೋರಾಗಿ ತಟ್ಟಿದರು.​ ​ಕೃಷ್ಣಮಠದ ಪಾಯದ ಕೋಣೆಗೆ ಬೆಂಕಿ ಹತ್ತಿಕೊಂಡಿದೆ ಎಲ್ಲಾ ಬನ್ನಿ ಎಂದು ಕೂಗುತ್ತಾ  ಮಠದ ಸಿಬ್ಬಂದಿ ಎಲ್ಲರಿಗೂ ವಿಷಯ ತಿಳಿಸುತ್ತಿದ್ದ. ತಕ್ಷಣ ನನ್ನ ಅಪ್ಪ ಲಾತವ್ಯಾಚಾರ್ ಮಠದ ಕಡೆಗೆ ಓಡಿದರು. ನಾವೂ ಕೂಡಾ ಅಮ್ಮನ ಜೊತೆ ಆ ಸ್ಥಳಕ್ಕೆ ಹೋದೆವು.

ಆದರೆ ನಾವು ಬರುವಷ್ಟರಲ್ಲಿ  ಶಿರೂರು ಶ್ರೀಪಾದರು ಬೆಂಕಿ ಹತ್ತಿಕೊಂಡಿದ್ದ ಪಾಯದ ಕೋಣೆಯ​ ​(ಶ್ರೀದೇವರಿಗೆ ಪಂಚಾಮೃತ ಸಾಹಿತ್ಯವನ್ನು ಸಂಗ್ರಹಿಸಿಡುವ ಕೋಣೆ) ಅಟ್ಟಕ್ಕೆ ಏಕಾಂಗಿಯಾಗಿ ಹತ್ತಿಯಾಗಿತ್ತು.​ ​ಅಲ್ಲದೆ ಚೌಕಿಯಲ್ಲಿದ್ದ ನೀರಿನ ಮಿನಿ ಪಂಪಿನ ಮೂಲಕ ನೀರನ್ನು ಸುಮಾರು ​ಮೂರು ಗಂಟೆಗಳ ಕಾಲ ಮಠದ ಕೆಲ ಸಿಬ್ಬಂದಿಗಳ ಜೊತೆ ಸೇರಿ ಜೋರಾಗಿ ಸಿಂಪಡಿಸುತ್ತಾ ಬೆಂಕಿಯನ್ನು  ನಿಯಂತ್ರಣಕ್ಕೆ ತಂದರು.​ ​ಅಗ್ನಿಶಾಮಕ ದಳದವರು ಆಗಮಿಸುವಾಗ ಬಹುತೇಕ ಕೆಲಸಗಳೆಲ್ಲಾ ಮುಗಿದಾಗಿತ್ತು.​ ​

ಬೆಂಕಿ ಸಂಪೂರ್ಣ ಆರಿದ ನಂತರ ಶ್ರೀಪಾದರು ಪಾಯದ ಮನೆಯ ಅಟ್ಟದಿಂದ ಜೈಶ್ರೀರಾಮ್ ಎಂದು ಹೇಳುತ್ತಾ ಕೆಳಗೆ ಜಿಗಿಯುತ್ತಿದ್ದಂತೆ ಸೇರಿದ್ದ ಜನ ಸಮೂಹ ಭಾರಿ ಕರತಾಡನದೊಂದಿಗೆ ಶ್ರೀಪಾದರನ್ನು ಸ್ವಾಗತಿಸಿದರು.​ ​ಕಪ್ಪು ಮಸಿಯಲ್ಲಿ ಮಿಂದಿದ್ದ ಶ್ರೀಪಾದರನ್ನು ಕಂಡು ನನಗೆ ಎಲ್ಲಿಲ್ಲದ ನಗು ಬಂದಿತು. ನನ್ನ ಬಳಿ ಬಂದವರೇ ನನ್ನ ಮುಸಿ ನಗುವನ್ನು ಕಂಡು ಅವರ ಮುಖದ ಮಸಿಯನ್ನು ನನ್ನ ಮುಖಕ್ಕೂ ಹಚ್ಚಿ ಸೀದಾ ಮಧ್ವಸರೋವರಕ್ಕೆ ಹೋಗಿಮಿಂದು ನೇರವಾಗಿ ಕೃಷ್ಣಪೂಜೆಗೆ ತೆರಳಿದರು.

 

 
 
 
 
 
 
 
 
 
 
 

Leave a Reply