ಕನ್ನಡ ರಾಜ್ಯೋತ್ಸವ ಆಚರಣೆ

ಗೆಳೆಯರ ಬಳಗ(ರಿ.) ಕಾರ್ಕಡ, ಸಾಲಿಗ್ರಾಮ ಹಾಗೂ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶ್ರೀ ಪಂಜು ಪೂಜಾರಿ ( ನಿವೃತ್ತ ವಿಜಯ ಬ್ಯಾಂಕ್ ಅಧಿಕಾರಿ ) ಇವರು ಕನ್ನಡ ಧ್ವಜಾರೋಹಣಗೈದು,ಭವ್ಯ ಪರಂಪರೆಯುಳ್ಳ ಕನ್ನಡನಾಡಿನ ಭಾಷೆ- ಸಂಸ್ಕೃತಿ ಹಾಗೂ ಆಚರಣೆಗಳನ್ನು ಬಳಸಿ ಉಳಿಸುವುದರ ಮೂಲಕ ಕಾರ್ಯಪ್ರವೃತ್ತರಾಗಬೇಕೆಂದು ಹಾಗೂ ಕನ್ನಡ ಮಾಧ್ಯಮದ ಶಾಲೆಯನ್ನು ಉಳಿಸಬೇಕೆಂದು ಕರೆ ನೀಡಿದರು. ಬಳಗದ ಅಧ್ಯಕ್ಷ ಶ್ರೀ ಕೆ. ತಾರನಾಥ ಹೊಳ್ಳ ಸ್ವಾಗತಿಸಿದರು ಹಾಗೂ ಶಾಲಾ ಮುಖ್ಯೋಪಾಧ್ಯಾಯ ಶ್ರೀ ಕೆ . ಪ್ರಭಾಕರ ಕಾಮತ್ ವಂದಿಸಿದರು. ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಶ್ರೀ ಕೆ ಶುಕ್ರ ಪೂಜಾರಿ ಹಾಗೂ ಬಳಗದ ಕಾರ್ಯದರ್ಶಿ ಕೆ. ಶೀನ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ ಹಾಗೂ , ಗೆಳೆಯರಬಳಗದ ಸದಸ್ಯರು, ಶಾಲಾ ಅಧ್ಯಾಪಕ ವೃಂದ, ಸ್ಥಳೀಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ನಂತರ ಮಕ್ಕಳಿಗೆ ಸಿಹಿತಿಂಡಿ ಹಂಚಲಾಯಿತು.ನಂತರ ಶಾಲಾ ಮಕ್ಕಳಿಗೆ ಲಿಖಿತ ರಸಪ್ರಶ್ನೆ ಏರ್ಪಡಿಸಲಾಯಿತು.

Leave a Reply