Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ಮಾಂಡವಿ ಆಕ್ರೊಪೊಲಿಸ್ ನ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಉಡುಪಿಯ ಹೃದಯ ಭಾಗದಲ್ಲಿರುವ ಮಾಂಡವಿ ಆಕ್ರೊಪೊಲಿಸ್ ನ ಆವರಣದಲ್ಲಿ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮಾಂಡವಿ ಆಕ್ರೊಪೊಲಿಸ್ ನ ನಿವಾಸಿಗಳೆಲ್ಲರೂ ಕೆಂಪು ಮತ್ತು ಹಳದಿ ಬಣ್ಣದ ಉಡುಗೆಯನ್ನು ಧರಿಸಿ ಹಾಗೂ ಮಕ್ಕಳೆಲ್ಲರೂ ಕನ್ನಡ ನಾಡಿಗಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ವೇಷ ಭೂಷಣಗಳನ್ನು ಧರಿಸಿಕೊಂಡು ಕನ್ನಡ ರಾಜ್ಯೋತ್ಸವದ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕನ್ನಡಾಂಬೆಗೆ ದೀಪ ಬೆಳಗುವ ಮೂಲಕ ಹಾಗೂ ಕನ್ನಡ ನಾಡಗೀತೆ ಹಾಡಿ ರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ನಾಡು ನುಡಿಯ ಬಗ್ಗೆ ಮಾಂಡವಿ ಆಕ್ರೊಪೊಲಿಸ್ ನ ಅಧ್ಯಕ್ಷರಾದ ಸುಕುಮಾರ್ ಶೆಟ್ಟಿಯವರು ಶುಭನುಡಿ ಹೇಳುವುದರ ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ಕನ್ನಡ ನಾಡು ಭಾಷೆ ಸಾಹಿತ್ಯ ಸಂಸ್ಕಾರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಭಾವಣೆ ಮಾಡುವುದರ ಬಗ್ಗೆ ಕಿವಿಮಾತನ್ನು ಹೇಳಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!