ಜಿಲ್ಲೆಯ ಪ್ರಥಮ ಆಕ್ಸಿಜನ್‌ ರಿಫಿಲ್ಲಿಂಗ್‌ ಸ್ಥಾವರ ಬೆಳಪುವಿನಲ್ಲಿ ಸ್ಥಾಪನೆ

ಉಡುಪಿ : ಕೊರೊನಾ ಬಾಧಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಆಕ್ಸಿಜನ್‌ಗೆ ಕೂಡ ತೀವ್ರ ಕೊರತೆ ಎದುರಾಗಿದೆ. ಇದನ್ನು ನಿವಾರಿಸಲು ರಾಜ್ಯ ಸರ್ಕಾರ ಉಡುಪಿ ಜಿಲ್ಲೆಯ ಪ್ರಥಮ ಆಕ್ಸಿಜನ್‌ ರಿಫಿಲ್ಲಿಂಗ್‌ ಘಟಕವೊಂದು ಕಾಪು ತಾಲೂಕಿನ ಬೆಳಪುವಿನಲ್ಲಿ ಸ್ಥಾಪನೆಯಾಗಿದೆ.

ಇಲ್ಲಿನ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಎಸ್‌.ಎನ್‌. ಕ್ರೈಯೋಜನಿಕ್ಸ್‌ ಪ್ರೈ. ಲಿ. ಸಂಸ್ಥೆಯು ಕೈಗಾರಿಕೆಗೆ ಮತ್ತು ಮೆಡಿಕಲ್‌ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಸರಬರಾಜು ಮಾಡುವ ಉದ್ದೇಶದೊಂದಿಗೆ ಘಟಕವನ್ನು ಸ್ಥಾಪಿಸಲಾಗಿದೆ. ಮುಂದಿನ ಒಂದೆರಡು ದಿನಗಳಲ್ಲೇ ಆಕ್ಸಿಜನ್‌ ಸಿಲಿಂಡರ್‌ಗಳ ಪೂರೈಕೆಯಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರಸ್ತುತ ಉಡುಪಿ ಜಿಲ್ಲೆಯ ಆಸ್ಪತ್ರೆಗಳು ಮತ್ತು ಕೈಗಾರಿಕೆಗಳು ಬೈಕಂಪಾಡಿ ಮತ್ತು ಕಾರ್ನಾಡ್‌ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಮೂರು ಆಕ್ಸಿಜನ್‌ ಘಟಕಗಳನ್ನು ಅವಲಂಬಿಸಿವೆ. ಬೆಳಪುವಿನ ಘಟಕ ಕಾರ್ಯಾರಂಭಿಸಿದಾಗ ಹೊರ ಜಿಲ್ಲೆಯ ಅವಲಂಬನೆ ಕಡಿಮೆಯಾಗಲಿದೆ.ರಿಫಿಲ್ಲಿಂಗ್‌ ಘಟಕಕ್ಕೆ ಬೇಕಾಗುವ ಲಿಕ್ವಿಡ್‌ ಆಕ್ಸಿಜನ್‌ ಅನ್ನು ಬೆಂಗಳೂರು ಮತ್ತು ಬಳ್ಳಾರಿ ಸಮೀಪದ ತೋರಂಗಲ್‌ನಿಂದ ತರಿಸಿಕೊಳ್ಳಲಾಗುತ್ತದೆ. ಏಕಕಾಲಕ್ಕೆ 20 ಸಾವಿರ ಕ್ಯೂಬಿಕ್‌ ಮೀ. ಲಿಕ್ವಿಡ್‌ ಆಕ್ಸಿಜನ್‌ (-180 ಡಿಗ್ರಿ) ತರಿಸಿ ದಾಸ್ತಾನು ಇರಿಸಿಕೊಂಡು ಬಳಿಕ ಗ್ಯಾಸ್‌ ಆಗಿ ಸಂಸ್ಕರಿಸಿ ಸಿಲಿಂಡರ್‌ಗಳಿಗೆ ತುಂಬಲಾಗುತ್ತದೆ.

ಜಿಲ್ಲೆಯ ಉಡುಪಿ, ಮಣಿಪಾಲ, ಕುಂದಾಪುರ, ಬ್ರಹ್ಮಾವರ, ಕಾರ್ಕಳ ಸೇರಿದಂತೆ ಸರಕಾರಿ ಮತ್ತು ಖಾಸಗಿ ವಲಯದ 40ಕ್ಕೂ ಅಧಿಕ ಆಸ್ಪತ್ರೆಗಳಿಗೆ ಬೆಳಪುವಿನಿಂದ ಕಡಿಮೆ ಸಾಗಾಟ ವೆಚ್ಚ ಮತ್ತು ಕಡಿಮೆ ಅವಧಿಯಲ್ಲಿ ಆಕ್ಸಿಜನ್‌ ಪೂರೈಕೆ ಸಾಧ್ಯವಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ನಟರಾಜ್‌ ತಿಳಿಸಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply