ಉಡುಪಿ ನಿತ್ಯಾನಂದ ಬಾಲಾಲಯದಲ್ಲಿ 250 ದಿನ ಪೂರೈಸಿದ ನಿತ್ಯಭಜನೆ

ಉಡುಪಿಯ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಸತತವಾಗಿ ನಡೆಯುತ್ತಿರುವ ನಿತ್ಯ ಭಜನೆ 250ನೇ ದಿನವನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಗುರುಗಳಿಗೆ ವಿಶೇಷ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು.

ಮಠವು ನವೀಕರಣ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗುರುಗಳ ವಿಗ್ರಹ ವನ್ನು ಬಾಲಾಲಯದಲ್ಲಿ ಇರಿಸಲಾಗಿದ್ದು ಈ ಬಾಲಾಲಯದಲ್ಲಿ ಕಳೆದ 250 ದಿನಗಳಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯುತ್ತಿದೆ. ಭಜನಾ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ನೂರಾರು ಭಕ್ತರು ಭಾಗವಹಿಸುತ್ತಿದ್ದು, ಈ ಭಜನಾ ಕಾರ್ಯಕ್ರಮವು ನೂತನ ಮಂದಿರದ ಪ್ರತಿಷ್ಠೆಯಾಗುವವರೆಗೂ ಮುಂದುವರೆಯಲಿದೆ ಎಂದು ಮಂದಿರದ ಪ್ರಮುಖರು ತಿಳಿಸಿದ್ದಾರೆ.

61 ವರ್ಷಗಳ ಹಿಂದೆ ನಿತ್ಯಾನಂದ ಸ್ವಾಮೀಜಿ ಅವರ ಪರಮ ಭಕ್ತೆ ಯಾಗಿದ್ದ ಸಾಧ್ವಿ ಸೀತಮ್ಮ ಅವರಿಂದ ಈ ಮಂದಿರ ಸ್ಥಾಪನೆಯಾಗಿದ್ದು , ಈಗ ದಾನಿಗಳ ನೆರವಿನಿಂದ ಗಣೇಶ ಪೂರಿಯಲ್ಲಿರುವ ಮೂಲ ಮಂದಿರದ ಮಾದರಿಯಲ್ಲೇ ಹೊಸ ಮಂದಿರ ವೈಭವದಿಂದ ತಲೆ ಎತ್ತುತ್ತಿದೆ.

ಮಂದಿರದ ನಿರ್ಮಾಣ ಕಾರ್ಯ ಬರದಿಂದ ನಡೆಯುತ್ತಿದ್ದು ಜನವರಿ 2ನೇ ವಾರ ಶ್ರೀ ಗುರುಗಳಿಗೆ ಬ್ರಹ್ಮ ಕುಂಭಾಭಿಷೇಕ ಮತ್ತು ನೂತನ ಮಂದಿರದ ಲೋಕಾರ್ಪಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಮೂಲಗಳಿಂದ ಅವಧೂತ ಪರಂಪರೆಗೆ ಸೇರಿದ ನೂರಾರು ಸಂತರು ಮತ್ತು ಗುರುಗಳ ಸಾವಿರಾರು ಭಕ್ತರು ಭಾಗವಹಿಸುವ ಸಾಧ್ಯತೆ ಇದೆ.

 
 
 
 
 
 
 
 
 

Leave a Reply