ಉಡುಪಿ: 1,095 ಗುಣಮುಖ

ಉಡುಪಿ: ಜಿಲ್ಲೆಯಲ್ಲಿ ಇಂದು 737 ಕೊರೊನಾ ಸೋಂಕು ದೃಢವಾಗಿದೆ. ಇದೇ ವೇಳೆ 1,095 ಮಂದಿ ಗುಣಮುಖರಾಗಿದ್ದಾರೆ. 4 ಮಂದಿ ಸಾವನ್ನಪ್ಪಿದ್ದು, 6,498 ಸಕ್ರಿಯ ಪ್ರಕರಣಗಳಿವೆ.

 2,825 ಮಂದಿಯನ್ನು ಇಂದು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ 694 ಮಂದಿ ಮನೆ ಆರೈಕೆ ಹಾಗೂ 43 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸೋಂಕಿತರ ಪೈಕಿ ಉಡುಪಿಯ 380, ಕುಂದಾಪುರ 294, ಕಾರ್ಕಳ 59 ಮತ್ತು ಹೊರ ಜಿಲ್ಲೆಗಳ 4 ಮಂದಿ ಸೇರಿದ್ದಾರೆ.

ಉಡುಪಿಯ 69 ಮತ್ತು 32ರ ಹರೆಯದ ಪುರುಷರು ಹಾಗೂ ಕುಂದಾಪುರದ 67 ಮತ್ತು 45ರ ಹರೆಯದ ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಡಿಎಚ್.ಓ ಡಾ. ಸುಧೀರಚಂದ್ರ ಸೂಡ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply