24 ವರ್ಷದ ಗರ್ಭಿಣಿ ಪಿಎಸ್​ಐ ಕರೊನಾಗೆ ಬಲಿ!

ಮಂಗಳೂರು: ಇನ್ನೇನು ಎರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿಯಾದ ಘಟನೆ ನಡೆದಿದೆ.

 ಎಲ್ಲವೂ ಸರಿಯಾಗಿದ್ದರೆ ಇನ್ನೆರಡು ತಿಂಗಳಲ್ಲಿ ಆ ಮನೆಯಲ್ಲಿ ಪುಟ್ಟ ಕಂದನ ಆಗಮನದ ಖುಷಿಯೇ ತುಂಬಿರುತ್ತಿತ್ತು.ಆದರೆ ಕ್ರೂರಿ ಕರೊನಾ ಗರ್ಭಿಣಿ ಪಿಎಸ್​ಐ ಅನ್ನು ಬಲಿ ಪಡೆದು ಮನೆಯವರನ್ನು ಶೋಕಸಾಗರಕ್ಕೆ ದೂಡಿದೆ.

24 ವರ್ಷದ ಚಿಕ್ಕ ವಯಸ್ಸಿಗೆ ಪೊಲೀಸ್​ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಕೋಲಾರ ಮೂಲದ ಯುವತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೆಷನರಿ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಆಗಿದ್ದರು. 7 ತಿಂಗಳ ಗರ್ಭಿಣಿ ಆಗಿದ್ದ ಅವರು ಹೆರಿಗೆ ರಜೆ ಮೇಲೆ ತವರಿಗೆ ಹೋಗಿದ್ದು, ಇದೀಗ ಮೃತಪಟ್ಟಿದ್ದಾರೆ.

Leave a Reply