ಉಡುಪಿಯ ವಿದ್ವಾನ್, ವಿದುಷಿಯರಿಂದ ಭರತ ನೃತ್ಯವಿಕಸನ ಕಾರ್ಯಕ್ರಮ

ಮಣಿಪಾಲ: ಕರ್ನಾಟಕ ಕರಾವಳಿ ನೃತ್ಯ ಕಲಾಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ನೃತ್ಯನಿಕೇತನ ಕೊಡವೂರು ಆಯೋಜಿಸಿದ ಭರತ ನೃತ್ಯವಿಕಸನ- ೧  ಕಾರ್ಯಕ್ರಮ ಮಣಿಪಾಲದ ಮಣ್ಣಪಳ್ಳದ ನಿರ್ಮಿತಿಕೇಂದ್ರದ ಸೋಪಾನ ವೇದಿಕೆಯಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ಉಡುಪಿ ಜಿಲ್ಲೆಯ ಎಲ್ಲಾ ನೃತ್ಯಗುರುಗಳ ಉಪಸ್ಥಿತಿಯಲ್ಲಿ ನೃತ್ಯಗುರು ರಾಮಕೃಷ್ಣ ಕೊಡಂಚರು ನೆರವೇರಿಸಿದರು.ಉಡುಪಿ ಜಿಲ್ಲೆಯ ಯುವ ವಿದ್ವಾನ್,ವಿದುಷಿಯರಾದ ಸಾಧನ, ಶ್ರೀಕಲ್ಯಾಣಿ, ಶ್ರೀಲತಾ ಅಡಿಗ, ಅಕ್ಷಿತ, ರಾಜೇಶ್ವರಿ, ರೋಶನ್, ಅಧಿತಿ, ಕಲಾಶ್ರೀ, ರಮ್ಯಶ್ರೀ, ಸ್ವಪ್ನ ಮತ್ತು ನಂದಿತ ನೃತ್ಯಪ್ರದರ್ಶನ ನೀಡಿದರು.

ಕಲಾವಿದರಿಗೆ ಕರಾವಳಿ ನೃತ್ಯಕಲಾಪರಿಷತ್ ಮಂಗಳೂರಿನ ಕಾರ್ಯದರ್ಶಿ ವಿದ್ವಾನ್ ಚಂದ್ರಶೇಖರ ನಾವಡ ಮತ್ತು ಉಡುಪಿಯ ಹಿರಿಯ ಉದ್ಯಮಿ ವಿಶ್ವನಾಥ ಶೆಣೈ ಪ್ರಮಾಣಪತ್ರ ನೀಡಿ ಅಭಿನಂದಿಸಿದರು.ವಿದ್ವಾನ್ ಚಂದ್ರಶೇಖರ ನಾವಡರು ಸ್ವಾಗತಿಸಿ ವಿದ್ವಾನ್ ಸುಧೀರ್ ರಾವ್ ಕೊಡವೂರು ವಂದಿಸಿದರು .ಉಡುಪಿಯ ಗುರುಗಳಾದ ವಿದುಷಿ ಯಶಾರಾಮಕೃಷ್ಣ, ವಿದುಷಿ ವೀಣ ಸಾಮಗ, ವಿದುಷಿ ಮಾನಸಿ ಸುಧೀರ್, ವಿದ್ವಾನ್ ಶ್ರೀಧರ ಬನ್ನಂಜೆ ಮತ್ತು ವಿದುಷಿ ಪ್ರವಿತಾ ಆಶೋಕ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply