ಮನೆಗೆ ಬೆಳಕಾದ ಸಮನ್ವಿ ಚೇತನ್ ಹುಟ್ಟುಹಬ್ಬ

ಉಡುಪಿ.ಆಸರೆ ಚಾರಿಟೇಬಲ್ ಟ್ರಸ್ಟ್(ರಿ) ಕಡಿಯಾಳಿ ಉಡುಪಿ ವತಿಯಿಂದ ಮೂಡು ಸಗ್ರಿ ವಾರ್ಡಿನ ಶ್ರೀಮತಿ ಆಶಾ ಸುಭಾಷ್ ನಾಯ್ಕ ನೊಳೆ ಮಜಲು ಇವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಯಿತು.

 ಕಳೆದ 16 ವರ್ಷಗಳಿಂದ ಈ ಮನೆಗೆ ವಿದ್ಯುತ್ ಸಂಪರ್ಕ ಇರಲಿಲ್ಲ, ಇದರ ಉದ್ಘಾಟನೆಯನ್ನು ಇಂದು ತನ್ನ ದ್ವಿತೀಯ ವರ್ಷದ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವ ಉಡುಪಿ ಕನ್ನರ್ಪಾಡಿ ನಿವಾಸಿ ಚೇತನ್ ಕುಮಾರ್ ಇವರ ಮಗಳು ಸಮನ್ವಿ ಚೇತನ್ ಮಾಗಿದ್ದಾಳೆ.

 ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಮಾತನಾಡಿ ತನ್ನ ಮಗುವಿನ ಹುಟ್ಟುಹಬ್ಬದ  ಸಲುವಾಗಿ ಈ ಬಡವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡಿದ ಚೇತನ್ ಕುಮಾರ್ ದಂಪತಿ ಸಮಾಜಕ್ಕೆ ಆದರ್ಶ ಸಂದೇಶ ನೀಡುವ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ ಎಂದು ಹೇಳಿದರು. 2022ರ ಒಳಗೆ ಉಡುಪಿ ನಗರ ನೂರು ಶೇಕಡಾ  ಮನೆಗೆ ವಿದ್ಯುತ್ ಸಂಪರ್ಕ ಹೊಂದಿದ ರಾಷ್ಟ್ರದ ಮೊದಲ ನಗರವಾಗಿ ಮಾಡಲಾಗುವುದು ಎಂದು ಹೇಳಿದರು.

 ನಗರಸಭೆ ಸದಸ್ಯೆ ಶ್ರೀಮತಿ ಭಾರತೀ ಪ್ರಶಾಂತ್, ನಗರಸಭಾ ಸದಸ್ಯೆ ಅರುಣ ಎಸ್ ಪೂಜಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಶ್ರೀಮತಿ ಸುಮಾ ನಾಯ್ಕ, ಉಪಸ್ಥಿತರಿದ್ದು ಆಸರೆ ಚಾರಿಟೇಬಲ್ ಟ್ರಸ್ಟ್ ನ ಕೋಶಾಧಿಕಾರಿ ಸತೀಶ್ ಕುಲಾಲ್ ಸ್ವಾಗತಿಸಿ ,ಶ್ರೀಮತಿ ವಿದ್ಯಾ ಶಾಂಸುಂದರ್ ಧನ್ಯವಾದವಿತ್ತರು. ಸ್ಥಳೀಯರಾದ ಮಾಧವ ನಾಯ್ಕ, ಸುಂದರ ನಾಯ್ಕ, ಸದಾನಂದ ನಾಯಕ್, ಪ್ರಶಾಂತ್ ಚಕ್ರತೀರ್ಥ, ಸುಮಾ ನಾಯ್ಕ, ಶರಣ ಶೆಟ್ಟಿ ಕನ್ನರ್ಪಾಡಿ ನವ್ಯ ಶೆಟ್ಟಿ, ಗೌತಮ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply