ಬಹು ನಿರೀಕ್ಷೆಯ ದೃಶ್ಯಂ 2 ಚಿತ್ರೀಕರಣ ಆರಂಭ

ಭಾರತೀಯ ಚಿತ್ರರಂದಲ್ಲಿ ಸಂಚಲನ ಮೂಡಿಸಿದ್ದ ಮಲಯಾಳಂನ ರೋಚಕ ಥ್ರಿಲ್ಲರ್ ಸಿನಿಮ ದೃಶ್ಯಂ ಸಿನಿಮದ ಮುಂದುವರಿದ ಭಾಗ  ದೃಶ್ಯಂ 2 ಚಿತ್ರೀಕರಣ ಆರಂಭಗೊಂಡಿದೆ.  ಚಿತ್ರದ ನಾಯಕ ಮೋಹನ್‌ಲಾಲ್ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಚಿತ್ರದ ಪೋಸ್ಟರ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಅಭಿಮಾನಿಗಳು ಇದರಿಂದ ಥ್ರಿಲ್ ಆಗಿದ್ದು, ದೃಶ್ಯಂ ಸೀಕ್ವೆಲ್‌ಗಾಗಿ ಸಾಕಷ್ಟು ವರ್ಷಗಳಿಂದ ಕುತೂಹಲದಿಂದ ಕಾಯುತ್ತಿದ್ದು, ಶುಭಾಶಯ ಸುರಿಮಳೆಗೈದಿದ್ದಾರೆ. ಈ ಹಿಂದಿನ ದೃಶ್ಯಂ ಕುಟುಂಬವೇ ಇದರಲ್ಲಿ ಮುಂದುವರಿದಿದೆ.
ಚಿತ್ರದ ಪೋಸ್ಟರ್‌ನಲ್ಲಿ ಮೋಹನ್‌ಲಾಲ್. ನಟಿ ಮೀನ, ಹನ್ಸಿಬ, ಈಸ್ತರ್ ಕಾಣಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಜೀತು ಜೋಸೆಫ್ ನಿರ್ದೇಶಿಸಿದ್ದ ದೃಶ್ಯಂ ಸಿನಿಮ ರೋಚಕ ಮರ್ಡರ್ ಮಿಸ್ಟರಿ ಕಥಾ ಹಂದರ ಹೊಂದಿತ್ತು. 2013ರಲ್ಲಿ ಬಿಡುಗಡೆ ಗೊಂಡು ಗಲ್ಲಪೆಟ್ಟಿಗೆ ಕೊಳ್ಳೆ ಹೊಡೆದಿತ್ತು.  ಕನ್ನಡ, ತೆಲುಗು, ಹಿಂದಿಯಲ್ಲಿ ಚಿತ್ರ ರಿಮೇಕ್ ಆಗಿ ಅಲ್ಲಿಯೂ ಸೂಪರ್‌ಹಿಟ್ ಆಗಿತ್ತು. ಅಷ್ಟೇ ಅಲ್ಲದೆ ‘ಶೀಫ್ ವಿಥೌಟ್ ಎ ಶೆಫರ್ಡ್‌‘ ಹೆಸರಲ್ಲಿ ಚೀನ ಭಾಷೆಯಲ್ಲಿಯೂ ರಿಮೇಕ್ ಆಗಿ ಚೀನದಲ್ಲಿಯೂ ಚಿತ್ರ ಸೂಪರ್ ಹಿಟ್ ಆಗಿತ್ತು.

ಭಾರತದ ಚಿತ್ರ ಒಂದು ಮೊದಲಭಾರಿಗೆ ವಿದೇಶಿ ಭಾಷೆಗೆ ರಿಮೇಕ್ ಆಗಿರುವ ಹೆಗ್ಗಳಿಕೆ ದೃಶ್ಯ ಪಡೆದುಕೊಂಡಿತು. ದೃಶ್ಯಂ2 ಸಿನಿಮವನ್ನು ಜೀತು ಜೊಸೆಫ್ ನಿರ್ದೆಶನ ಮಾಡುತ್ತಿದ್ದು, ಸಿನಿ ಪ್ರಿಯರು ಮತ್ತಷ್ಟು ಥ್ರಿಲ್ ಆಗಿದ್ದಾರೆ. 

 
 
 
 
 
 
 
 
 
 
 

Leave a Reply