ಮುಂಬೈನಲ್ಲಿ ನಗರದಾದ್ಯಂತ ವಿದ್ಯುತ್‌ ಸಂಪೂರ್ಣ ಸ್ಥಗಿತ

ಮುಂಬೈ: ಮುಂಬೈನಲ್ಲಿ ನಗರದಾದ್ಯಂತ ವಿದ್ಯುತ್‌ ಸಂಪೂರ್ಣ ಸ್ಥಗಿತಗೊಂಡಿದದ್ದು, ಪವರ್ ಗ್ರಿಡ್ ವೈಫಲ್ಯ ದಿಂದ ಹೀಗಾಗಿದೆ ಎಂದು ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಇಲಾಖೆ (BEST) ತಿಳಿಸಿದೆ.

ಸದ್ಯ ಟಾಟಾ ಸೇರಿದಂತೆ ಇತರ ಕಂಪನಿಗಳು ವಿದ್ಯುತ್‌ ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಗರದಲ್ಲಿ ಸಬ್‌ಅರ್ಬನ್‌ ರೈಲು, ಮೆಟ್ರೋ ಸೇವೆಗಳಿಗೂ ಅಡ್ಡಿ ಉಂಟಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್​ಒ) ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ ಸೇರಿದಂತೆ ಇತರೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಅಲೆದಾಡುವಂತಾಗಿದೆ.

 
 
 
 
 
 
 
 
 
 
 

Leave a Reply