ಬಲೇ ಚಾ ಪರ್ಕ…. ಬನ್ನಿ ಚಹ ಕುಡಿಯೋಣ..! – ಸುಬ್ರಹ್ಮಣ್ಯ ಹೆಗಡೆ, ಉಡುಪಿ.

ಜಗತ್ತಿನ ಕೋಟ್ಯಾಂತರ ಜನರಿಗೆ ಒಂದು ಕಪ್ ಚಹ ಇಲ್ಲದೇ ದಿನ ಮುಗಿಸೋದು ಕಷ್ಟ ಸಾಧ್ಯ. ಟೀ ಕುಡಿಯದೇ ಮನಸ್ಸನ್ನು ನಿಗ್ರಹಿಸುವುದು ಕಷ್ಟ. ಮನಸಿಗೆ ಉಲ್ಲಾಸ ಹುರುಪು ಮೂಡಲು ಚಹ ಬೇಕು. ಚಹ ಕುಡಿಯದೇ ಇದ್ರೆ ಅದೇನು ಕಳೆದುಕೊಂಡ ಭಾವ ಮನದಲ್ಲಿ..

ವಿಶ್ವದ ಅತ್ಯಂತ ಜನಪ್ರಿಯ ಪೇಯಗಳಲ್ಲಿ ಚಹ ಮೊದಲು

ಹೀಗಿರುವ ಚಹ ದಲ್ಲಿ ಎಷ್ಟೆಲ್ಲ ವಿಧಗಳಿವೆ. ಒಂದೊಂದು ದೇಶ ಪ್ರದೇಶಗಳಲ್ಲಿ ಒಂದೊಂದು ವಿಧಿ ವಿಧಾನದ ಮೂಲಕ ಚಹ ಮಾಡಿ ಕುಡಿಯುತ್ತಾರೆ.ಕೆಲವರಿಗೆ ಸ್ಟ್ರಾಂಗ್‌ ಚಹಾ, ಇನ್ನು ಕೆಲವರಿಗೆ ಲೈಟ್‌ ಚಹಾ, ಮತ್ತೂ ಕೆಲವರಿಗೆ ಹಾಲು ಹಾಕದ ಕಪ್ಪು ಚಹ (ಕನ್ನು ), ಇನ್ನು ಒಂದಿಷ್ಟು ಆರೋಗ್ಯದ ಮೇಲೆ ಕಾಳಜಿ ಇರುವವರಿಗೆ ನಿಂಬೆ ಚಹಾ (ಲೈಮ್ ಟೀ) ಇಷ್ಟ. ಯಾವುದೋ ಒಂದು. ಆದರೆ ಚಹಾ ಬೇಕೇ ಬೇಕು. ಭಾರತದಲ್ಲಿ 8 ವಿವಿಧ ಬಗೆಯ ಚಹ ಕುಡಿಯಲಾಗುತ್ತದೆ.

ಇಂತ ಚಹದ ಮೂಲ ಹುಡುಕ್ತಾ ಹೋದ್ರೆ ಹಲವು ಕಥೆ ಗಳಿವೆ. ಹೆಚ್ಚಿನ ಮಾಹಿತಿ ಗಳ ಪ್ರಕಾರ ಚೀನಾ ಚಹದ ಹುಟ್ಟೂರು ಅನ್ನಬಹುದು.ಜೊತೆಗೆ ಚೀನಿಯರು ಮಾರಾಟ ಮತ್ತು ಪ್ರಚಾರದಲ್ಲಿ ಎತ್ತಿದ ಕೈ. ಚಹದ ಕಂಪನ್ನ ಜಗತ್ತಿನಾದ್ಯಂತ ಪಸರಿಸಿದರು.ಚೀನಿಯರ ದಿನ ಬಳಕೆಯಲ್ಲಿ ಚಹ ಕ್ಕೆ ಅಗ್ರ ಸ್ಥಾನ.ಚಹ ಬಳಕೆ ಸಂಬಂಧಿಸಿದಂತೆ ಚೀನಾದಲ್ಲಿ ಹೀಗೊಂದು ಕಥೆ ಚಾಲ್ತಿಯಲ್ಲಿದೆ.

ಕ್ರಿ.ಪೂ 2737ರಲ್ಲಿ ರಾಜ ಶೆನ್‌ ನಂಗ್‌, ಕೆಮೆಲಿಯ ಜಾತಿಗೆ ಸೇರಿದ ಮರದ ನೆರಳಿನಲ್ಲಿ ಕುಳಿತು ಬಿಸಿ ನೀರು ಕುಡಿಯುತ್ತಿದ್ದಾಗ ಎಲೆಯೊಂದು ನೀರ ಕಪ್‌ಗೆ ಬಿತ್ತು. ಆಗ ನೀರಿನ ಬಣ್ಣ ಬದಲಾಯಿತು, ಸುವಾಸನೆಯೂ ಬಂತು. ಕಾಣಲು ಆಕರ್ಷಕವಾಗಿದ್ದ ಆ ನೀರಿನ ರುಚಿಯನ್ನು ಪರೀಕ್ಷಿಸಿದ. ಅದರ ರುಚಿ ಅವನಿಗೆ ವಿಶಿಷ್ಟ ಎನಿಸಿತು.

ಬಳಿಕ ಚಹ ದಲ್ಲಿನ ಔಷಧಿ ಗುಣ ಗಮನಿಸಿ ಔಷದೀಯ ಪೇಯವನ್ನಾಗಿ ಬಳಸಲಾಗುತ್ತಿತು. ತದ ನಂತರ ಅದರ ಸ್ವಾದ ಮತ್ತು ವಿಶಿಷ್ಟ ರುಚಿಗಳಿಂದ ಎಷ್ಯಾ ಖಂಡಕ್ಕೂ ಬಹುಬೇಗ ಹರಡಿತು. ವಸಹಾತು ಶಾಹಿಗಳಿಂದ, ವ್ಯಾಪಾರಿಗಳಿಂದ ವಿಶ್ವದ ಬೇರೆ ಬೇರೆ ಪ್ರದೇಶಗಳಿಗೆ ಹಬ್ಬಿತು.

ಭಾರತದಲ್ಲಿ ಚಹ

ಒಂದು ಮೂಲಗಳ ಪ್ರಕಾರ ಭಾರತದಲ್ಲಿ ಕ್ರಿ ಪು 750 ರಲ್ಲೆ ಜನ ಚಹ ಬಳಸುತ್ತಿದ್ದರೆನ್ನುವ ಇತಿಹಾಸ ಇದೆ.ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಅವತಾರ ಪುರುಷ ಗೌತಮ ಬುದ್ಧ ಮೊಟ್ಟ ಮೊದಲ ಬಾರಿ ಚಹಾ ಸೇವಿಸಿದನೆಂಬ ಒಂದು ಉಲ್ಲೇಖ ಇದೆ.ಕೆಮಿಲಿಯಾ ಸಿನೆನ್ಸಿಸ್ ಎನ್ನುವ ಗಿಡದ ಪೇಯವನ್ನ ಶಕ್ತಿವರ್ಧನೆಗಾಗಿ ಔಷಧ ರೂಪವಾಗಿ ನಮ್ಮ ಆಯುರ್ವೇದದಲ್ಲಿ ಕೊಡುತ್ತಿದ್ದರು ಎನ್ನುವ ಉಲ್ಲೆಖ ಕೂಡಾ ಇದೆ.

ಇತಿಹಾಸದಲ್ಲಿ ಉಲ್ಲೇಖಸಿದ ಪ್ರಕಾರ 18 ನೇ ಶತಮಾನದಲ್ಲಿ ಚೀನಾದ ಚಹ ಬೆಳೆಯ ಪ್ರಾಬಲ್ಯ ಅಳಿಸಲು ಇಸ್ಟ್ ಇಂಡಿಯಾ ಕಂಪನಿ ಭಾರತದ ಅಸ್ಸಾಂ ಕಣಿವೆಗಳಲ್ಲಿ ವಾಣಿಜ್ಯ ದ್ರಷ್ಟಿ ಇಂದ ಚಹ ಬೆಳೆಯುವ ಮೂಲಕ ಅಧಿಕೃತ ವಾಗಿ ಚಹ ಭಾರತ ಪ್ರವೇಶಿಸಿತು.ಇಂದು ಭಾರತ ಕೂಡ ಚಹ ಉತ್ಪಾದಿಸುವ ಜೊತೆಗೆ ರಫ್ತು ಮಾಡುವ ದೇಶಗಳ ಪೈಕಿ ಮುಂಚೂಣಿಯಲ್ಲಿದೆ ಅಬ್ಬಾ ಎಷ್ಟೆಲ್ಲ ಇತಿಹಾಸ ನಾವು ಕುಡಿಯುವ ಚಹ ಕ್ಕೆ. ಹುರುಪು ಮೂಡಿಸುವ ಪೇಯಕ್ಕೆ ಎಷ್ಟೆಲ್ಲ ಇತಿಹಾಸ. ಹೇಳುತ್ತಾ ಹೋದರೆ ಚಹದ ರುಚಿ ಬಗೆದಷ್ಟು ಆಳ..!

ವಿಶ್ವದಲ್ಲಿ ಚಹ ಉತ್ಪಾದನೆ 

2018 ರಲ್ಲಿನ ಒಂದು ಅಂದಾಜಿನ ಪ್ರಕಾರ ಜಗತ್ತಿನಲ್ಲಿ ವಾರ್ಷಿಕ 5.8 ಬಿಲಿಯನ್ ಮೆಟ್ರಿಕ್ ಟನ್ ಚಹ ಉತ್ಪಾದನೆ ಆಗಿದೆ. ಅದರಲ್ಲಿ ವಾರ್ಷಿಕ 1.76 ಬಿಲಿಯನ್ ಮೆಟ್ರಿಕ್ ಟನ್ ರಫ್ತು. ವಾರ್ಷಿಕ 4.7 ಪರ್ಸೆಂಟ್ ಉತ್ಪಾದನೆ ಯಲ್ಲಿ ಏರಿಕೆ ಆಗುತ್ತಿದೆ. 2020 ರಲ್ಲಿ ವಿಶ್ವದ ಚಹದ ಮಾರುಕಟ್ಟೆ 200 ಬಿಲಿಯನ್ ಯು ಎಸ್ ಡಾಲರ್..!

ಇನ್ನು ವಿಶ್ವದ ಜನರು ಚಹ ಕುಡಿಯೋದರಲ್ಲಿ ತುಂಬಾ ನಿಪುಣರು.. 2020ರಲ್ಲಿ ವಾರ್ಷಿಕ 6.3 ಬಿಲಿಯನ್2025ರಲ್ಲಿ 7.4 ಬಿಲಿಯನ್ ಗೆ ತಲುಪಬಹುದು ಅನ್ನುವ ಅಂದಾಜುಜಗತ್ತಿನಲ್ಲಿ ನೀರಿನ ನಂತರ ಚಹವನ್ನೇ ಕುಡಿಯಲಾಗುತ್ತದೆ..!

ಭಾರತದಲ್ಲಿ ಉತ್ಪಾದನೆ

2020ರಲ್ಲಿ 1256 ಮಿಲಿಯನ್ ಕೆ ಜಿ ಚಹ ಉತ್ಪಾದಿಸಲಾಗಿದ್ದು ಒಂದು ವರ್ಷದ ಈಚೆ ಟೀ ಬೆಳೆಯುವ ಪ್ರಮುಖ ರಾಜ್ಯ ಅಸ್ಸಾಂ ಸೇರಿದಂತೆ ಹಲವು ಕಡೆ ನೆರೆ ಬಂದು ವಾರ್ಷಿಕ 9.7% ಉತ್ಪಾದನೆ ಇಳಿಮುಖ ಕಂಡಿದೆ. 2020 ರಲ್ಲಿ ರಫ್ತು ವಹಿವಾಟು ವಾರ್ಷಿಕ 41.60 ಬಿಲಿಯನ್ ತಲುಪಿದೆ. 2020 ರಲ್ಲಿ ಅಂದಾಜು 1000 ಮಿಲಿಯನ್ ಚಹ ಭಾರತ ದಲ್ಲೇ ಬಳಸಲಾಗಿದೆ.ಇಂದು ಇಂಡೋನೆಶಿಷ್ಯಾ,ಭಾರತ,ಚೀನಾ, ಶ್ರೀಲಂಕಾ,ಕಿನ್ಯ ವಿಶ್ವದ ಅತೀ ಹೆಚ್ಚು ಚಹ ಉತ್ಪಾದಿಸಿ ರಫ್ತು ಮಾಡುವ ದೇಶಗಳು.

ಈಗ ಮಾರುಕಟ್ಟೆಯಲ್ಲಿ 100 ಅಧಿಕ ಬಗೆಯ ವಿವಿಧ ಚಹ ಲಭ್ಯವಿದೆ.ನೈಸರ್ಗಿಕವಾಗಿ ಬೆಳೆದ ಕಾಡು ಗಿಡವೊಂದು ವಾಣಿಜ್ಯ ಬೆಳೆಯಾಗಿ ಬೆಳದ ಪರಿ ವಿಸ್ಮಯ ಉಂಟು ಮಾಡುತ್ತಿದೆ.ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ.

ಈ ಕೊರೋನಾ ಹೊತ್ತಲ್ಲಿ ಸಾವಿನ ಜಂಜಾಟ ನೋಡಿ ಜಿಗುಪ್ಸೆ ಆಗುವ ಹೊತ್ತು. ಬನ್ನಿ ಚಹ ಕುಡಿಯೋಣ..ಹೊಸ ಚೈತನ್ಯ ಹುರುಪು ಪಡೆದು ಜೀವನ ಸಾಗರದಲ್ಲಿ ಮರಣ ಬರುವವರೆಗೆ ಈಜಿ ಸಾಧನೆ ಅನ್ನುವ ಪುಟ ಸೇರೋಣ… 

ಸಾಕಂಡ್.. ಒಂಜಿ ಸ್ಟ್ರಾಂಗ್ ಚಾ ಕೊರ್ಲೆ ತುಕ…

 
 
 
 
 
 
 
 
 
 
 

Leave a Reply