ಶಿರ್ವ- ಕಾಲೇಜಿನ ಆವರಣದಲ್ಲಿ ತರಕಾರಿ ಕೈತೋಟಕೆ ಚಾಲನೆ

ಶಿರ್ವ:- ಶಿರ್ವದ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಪದವಿ ಕಾಲೇಜಿನ ಆವರಣದಲ್ಲಿ  ಕಾಲೇಜಿನ ಗ್ರೀನ್  ಕ್ಯಾಂಪಾಸ್ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಂದ ತರಕಾರಿ ಕೈತೋಟದ ರಚನೆಯ ಬಗ್ಗೆ ಪ್ರಾತಿಕ್ಷಿಕೆ ಮಾಹಿತಿಯನ್ನು ಕಾಲೇಜಿನ ಹಳೆವಿದ್ಯಾರ್ಥಿ, ಪ್ರಗತಿಪರ ಕೃಷಿಕ, ರಾಜ್ಯಪ್ರಶಸ್ತಿ ಪುರಸ್ಕೃತ ಶಿರ್ವ ರಾಘವೇಂದ್ರ ನಾಯಕ್ ನೀಡಿದರು.ಮಳೆಗಾಲದಲ್ಲಿ ಅತ್ಯಲ್ಪ ಅವಧಿಯಲ್ಲಿ ಫಲ ನೀಡುವ ಬೆಂಡೆ, ಅಲಸಂಡೆ, ಹೀರೆ,ಸೋರೆ, ಮೂಲಂಗಿ, ಹರಿವೆ, ಮುಳ್ಳು ಸೌತೆ, ಹಾಗಲಕಾಯಿ ಮೊದಲಾದ ತರಕಾರಿ ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ನೆಲದಲ್ಲಿ ಸಾಲುಗಳ ರಚನೆ, ಸಾವಯವ ಗೊಬ್ಬರದ ಬಳಕೆ,ಬೀಜಗಳ ಬಿತ್ತನೆ ಕಾರ್ಯದ ಪ್ರಾತಿಕ್ಷಿಕೆ ಮಾಡಲಾಯಿತು.

 ಅತಿಯಾದ ಸೆಕೆ ,ಚಳಿ, ಮಳೆ, ಗಾಳಿಯ ವೈಪರಿತ್ಯ ಮತ್ತು ಕೀಟಾಣುಗಳಿಂದ ಹೂವು, ಹಣ್ಣು, ತರಕಾರಿಗಳನ್ನು ರಕ್ಷಿಸುವುದರ ಜೊತೆಗೆ ರಾಸಾಯನಿಕಗಳ ಸಿಂಪಡನೆ ಇಲ್ಲದೆ ರೋಗ ರಹಿತವಾದ ಉತ್ತಮ ಸಾವಯವ ಕೃಷಿ ಉತ್ಪನ್ನಗಳನ್ನು ಬೆಳೆಸುವ ನಿಟ್ಟಿನಲ್ಲಿ ಉಪಯುಕ್ತ ಮಾಹಿತಿ ನೀಡಿದರು.

ಕಾಪು ತಾಲೂಕು ಕಸಾಪ ಅಧ್ಯಕ್ಷ, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಬೀಜ ಬಿತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಮ್ಮ ಹಿರಿಯರು ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಆರೋಗ್ಯಕರ ಜೀವನ ನಡೆಸಿದ್ದರು. ಕಲಿಕೆಯ ಜೊತೆಯಲ್ಲಿ ಸ್ವಲ್ಪ ಸಮಯವನ್ನು ಕೃಷಿ ಕಾರ್ಯಕ್ಕೆ ವಿನಿಯೋಗಿಸುವುದರ ಮೂಲಕ ಸ್ವಾವಲಂಬನೆ ಒತ್ತು ನೀಡಬೇಕಾಗಿದೆ.

ಮನೆಯಂಗಳದಲ್ಲಿ ಗೋಣಿಚೀಲಗಳಲ್ಲಿಯೂ ತರಕಾರಿಗಳನ್ನು ಬೆಳೆಸುವ ಮೂಲಕ ಮನೆಗೆ ಬೇಕಾದ ಎಲ್ಲಾ ರೀತಿಯ ಸೊಪ್ಪು, ತರಕಾರಿಗಳನ್ನು ಪಡೆಯಬಹುದು ಎಂದರು. 
ಕಾಲೇಜಿನ ಪ್ರಾಂಶುಪಾಲೆ ಡಾ.ನಯನಾ ಎಂ.ಪಕ್ಕಳ ಪ್ರಸ್ತಾವನೆಯ ಮೂಲಕ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವರ್ಗದವರು ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡರು
 
 
 
 
 
 
 
 
 
 
 

Leave a Reply