ಶಾಲೆಗಳು ಅಧ೯ ಶುಲ್ಕ ಪಡೆಯಲಿ~ರಾಘವೇಂದ್ರ ಪ್ರಭು,ಕವಾ೯ಲು

ಕರೋನಾ ಎಂಬ ಮಹಾಮಾರಿ ಜಗತ್ತನ್ನು ಹೈರಾಣಗೊಳಿಸಿದೆ.ಕಳೆದ 7 ತಿಂಗಳಿಂದ ಜನರು ಆಥಿ೯ಕ ಸಂಕಷ್ಟದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಈ ಅವಧಿಯಲ್ಲಿ ಖಾಸಗಿ ಶಾಲೆಗಳು ಶುಲ್ಕ ಪಾವತಿ ಮಾಡಲು ಪೋಷಕರನ್ನು ಒತ್ತಾಯಿಸುತ್ತಿದೆ. ಸಕಾ೯ರ ಶಾಲೆಗಳನ್ನು ತೆರೆಯಲು ತಯಾರಿ ನಡೆಸುತ್ತಿರುವ ಈ ಸಂದಭ೯ದಲ್ಲಿ ಶಾಲೆಗಳು ಕೂಡ ಶುಲ್ಕ ಪಾವತಿಸಲು ವಿದ್ಯಾಥಿ೯ ಗಳ ಪೋಷಕರನ್ನು ಒತ್ತಾಯಿಸುತ್ತಿರುವುದು ಸರಿಯಲ್ಲ.

ಅಧ೯ ಶುಲ್ಕ ತೆಗೆದುಕೊಳ್ಳಲಿ:- ಶಾಲೆಗಳು ತೆರೆದಿಲ್ಲ ಕೆಲವು ಶಾಲೆಗಳು ಆನ್ಲೈನ್ ತರಗತಿ ಮಾಡಿದರೂ ಅದು ಸಮಪ೯ಕವಾ ಗಿಲ್ಲ ಆದರೂ ಪೂತಿ೯ ಶುಲ್ಕ ಪಾವತಿಸುವುದು ಸರಿಯೇ? ಈಗಾಗಲೇ ಆಂದ್ರ ಸಕಾ೯ರ ಎಲ್ಲಾ ಶಾಲೆಗಳ ಶುಲ್ಕವನ್ನು ಶೇ.30 ರಷ್ಟು ಕಡಿಮೆ ಮಾಡಿದೆ. ನಮ್ಮ ರಾಜ್ಯದಲ್ಲಿಯೂ ಕೂಡ ಅಧ೯ ಶುಲ್ಕ ತೆಗೆದುಕೊಳ್ಳಲಿ ಸಾವಿರಾರು ಮಂದಿ ಪೋಷಕರು ಜೀವನ ಸಾಗಿ ಸಲು ಕಷ್ಟ ಪಡುತ್ತಿರುವ ಸಂದಭ೯ದಲ್ಲಿ ಈ ರೀತಿಯಾಗಿ ಶುಲ್ಕ ಪಡೆಯುದನ್ನು ತಡೆಯಲು ಸಕಾ೯ರ ಕಠಿಣ ಕ್ರಮ ಕೈಗೊಳ್ಳ ಬೇಕು.

ಎಷ್ಟೋ ಶಾಲೆಗಳು ಶುಲ್ಕ ಮಾತ್ರವಲ್ಲದೆ ಡೊನೇಶನ್ ಕೂಡ ಪಡೆಯುತ್ತಿವೆ. ಶಾಲೆಗಳು ಪ್ರಾರಂಭವಾಗದಿದ್ದರೂ ಕ್ರೀಡಾ ಶುಲ್ಕ, ಕಟ್ಟಡ ಶುಲ್ಕದ ಹೆಸರಿನಲ್ಲಿ ಹಣ ಪಡೆಯುತ್ತಿವೆ. ಒಂದು ವೇಳೆ ಈ ಬಗ್ಗೆ ಪೋಷಕರು ದೂರು ನೀಡಿದರೆ ಅವರ ಮಕ್ಕಳಿಗೆ ತೊಂದರೆ ಯಾಗ ಬಹುದು ಎಂಬ ಕಾರಣದಿಂದ ಪೋಷಕರು ಸುಮ್ಮನಿರುವ ಸಂದಭ೯ ಎದುರಾಗಿದೆ. ಈ ವಷ೯ದಲ್ಲಿ ಎಲ್ಲಾ ಶಾಲೆಗಳು ಶೇ. 50 ರಷ್ಟು ಶುಲ್ಕ ಪಡೆಯಲಿ. ಕರೋನಾ ದೂರವಾಗಲಿ ಆದಷ್ಟು ಬೇಗ ಶಾಲೆಗಳು ಪ್ರಾರಂಭವಾಗಲಿ’

 
 
 
 
 
 
 
 
 
 
 

Leave a Reply