ಭಾರತದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಇಳಿಕೆಯಾಗುತ್ತಿದಂತೆಯೇ ಶಾಲಾ ಕಾಲೇಜು ಆರಂಭಿಸಲು ಯುಜಿಸಿ ಅನುಮತಿ ನೀಡಿದೆ. ಕೊರೋನಾ ಹರಡದಂತೆ ಶಾಲಾ ಕಾಲೇಜು ಪುನರಾರಂಭಕ್ಕೆ ಯುಜಿಸಿ ಹೊಸ ಮಾರ್ಗಸೂಚಿಯನ್ನು ನೀಡಿದೆ ಎಂದು ಶಿಕ್ಷಣ ಸಚಿವ ಡಾ. ರಮೇಶ್ ಪೋಕ್ರಿಯಾಲ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
#ಶಾಲೆ ಕೊಠಡಿಯಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳಿಗೆ ವಿವಿಧ ಅವಧಿಗಳಲ್ಲಿ ತರಗತಿ ನಡೆಸಬೇಕು. #ವಾರದಲ್ಲಿ 6 ದಿನ ತರಗತಿ ನಡೆಸಲು ಅನುಮತಿ ನೀಡಿದ್ದು, ಶಾಲೆಯಲ್ಲಿ ದೈಹಿಕ ಅಂತರ ಕಡ್ಡಾಯ. #ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ. #ಶಾಲಾ ಕಾಲೇಜು ಆವರಣದಲ್ಲಿ ಉಗುಳ ಬಾರದು.
#ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿನ ಯಾವ ಶಾಲೆ ಹಾಗೂ ಕಾಲೇಜುಗಳನ್ನು ಪುನರಾರಂಭಗೊಳಿಸುವ ಬಗ್ಗೆ ತೀರ್ಮಾನ ಮಾಡಬೇಕು. #ವಿದೇಶಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಬೇಕು. #ಕಂಟೈನ್ ಮೆಂಟ್ ಪ್ರದೇಶದಲ್ಲಿ ಶಾಲೆ, ಕಾಲೇಜು ಪ್ರಾರಂಭಿಸ ಬಾರದು.