ನೀವೂ ಮುದುಕರಾಗಲೇ ಬೇಕು~ ಡಾ. ಶಶಿಕಿರಣ್ ಶೆಟ್ಟಿ

ಆ ಅನಾಥ ವೃದ್ದಾಶ್ರಮಕ್ಕೆ ಅಂದು ಅಗರ್ಭ ಶ್ರೀಮಂತನೊಬ್ಬ ಬಂದಿದ್ದ. ಅಲ್ಲಿ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ  70 ಹಿರಿಯ ಜೀವಗಳಿದ್ದವು. ಆತ ಖುಷಿ ಇಂದ ಹೇಳಿದ ಇಂದು ನನ್ನ ಮಗನ ಜನ್ಮದಿನ ನಿಮಗೆಲ್ಲ ಒಂದು ಆಫರ್ ಕೊಡುತ್ತಿದ್ದೇನೆ.  ನಿಮಗೆ ಏನೇನು ಆಸೆಗಳಿವೆ ಇಲ್ಲಿರುವ ಡಬ್ಬಕ್ಕೆ ಬರೆದು ಹಾಕಿ.  ಅದೆಷ್ಟೇ ಮೌಲ್ಯದ್ದಾಗಲಿ ನಿಮಗೆ ನಾನು ತಂದು ಕೊಡುತ್ತೇನೆ ಎಂದ.
ಎಲ್ಲಾ ವೃದ್ಧರೂ ಒಬ್ಬೊಬ್ಬರಾಗೆ ತಮ್ಮ ಆಸೆ ಗಳನ್ನು ಬರೆದು ಹಾಕಿದರು, ಅದನ್ನು ಓಪನ್ ಮಾಡಲಾಯಿತು ಶ್ರೀಮಂತ ಯೋಚಿಸಿದ್ದ ಎಲ್ಲಾ ಊಟ, ಬಂಗಾರ ಅಮೂಲ್ಯ ಉಡುಗೊರೆ ಕೇಳಬಹುದು ಎಂದು, ಅದೆಲ್ಲ ಈಡೇರಿಸುವುದು ಅವನ ಶ್ರೀಮಂತಿಕೆ ಎದುರು ಅಷ್ಟೇನೂ ದೊಡ್ಡ ಸವಾಲಾಗಿರಲಿಲ್ಲ ಆತನಿಗೆ, ಆದರೆ ಆ ಚೀಟಿ ಓದಿದಾಗ. ಅವನಿಗೆ ದುಃಖವಾಗಿತ್ತು.
ಅವರು ಕೇಳಿದ್ದು ಇವನಿಂದ ಕೊಡಲಾಗಿರಲಿಲ್ಲ, ಕಣ್ಣೀರಿನೊಂದಿಗೆ ಅಲ್ಲಿಂದ ವಾಪಾಸ್  ಹೋದ ಎಲ್ಲಾ ವೃದ್ಧರು ತಮ್ಮ ತಮ್ಮ ಮಕ್ಕಳ ಪ್ರೀತಿಯ ಮಾತು ಬೇಕು ಎಂದೇ ಬರೆದಿದ್ದರು. ಅದು ಶ್ರೀಮಂತನ ಕೈಯಲ್ಲಿರಲಿಲ್ಲ.

ಹೌದು ಹಣ ಆಸ್ತಿ ಚಿನ್ನ ಒಡವೆ ಎಲ್ಲಾ ಬೇಕಿರುವುದು ಒಂದು ಹಂತದ ವರೆಗೆ ಮಾತ್ರ ಮತ್ತೆ ಬೇಕಿರುವುದು ಮಕ್ಕಳ ಪ್ರೀತಿ ಭರಿತ ಒಂದಿಷ್ಟು ಮಾತು, ಸಾಂತ್ವನ, ನಾನಿದ್ದೇನೆ ನಿಮ್ಮೊಂದಿಗೆ ಎನ್ನುವ ಧೈರ್ಯ ತುಂಬಿದ ನುಡಿಗಳಷ್ಟೇ ಅದನ್ನು ಕೊಡುವಲ್ಲಿ ಎಡವಬೇಡಿ.  ಯಾಕೆಂದರೆ ಕಾಲ ಚಕ್ರ ತಿರುಗುತ್ತಿರುತ್ತದೆ ನೆನಪಿಡಿ… ನಾಳೆ…  ನೀವೂ ಮುದುಕರಗಲೇ ಬೇಕು.

 ~ ಡಾ. ಶಶಿಕಿರಣ್ ಶೆಟ್ಟಿ 
 
 
 
 
 
 
 
 
 
 
 

Leave a Reply