ಗೂಗಲ್ ಹಿಸ್ಟರಿ ಪಾಸ್ ವರ್ಡ್ ಮತ್ತು ಹಿಸ್ಟರಿ ಆಟೋ ಡಿಲೀಟ್ ಮಾಡುವ ಸಿಂಪಲ್ ವಿಧಾನ~ಕಿರಣ್ ಪೈ ಮಂಗಳೂರು

ಗೂಗಲ್ ಸರ್ಚ್ ಹಿಸ್ಟರಿಗೆ ಪಾಸ್ವರ್ಡ್ ಸೆಟ್ ಮಾಡುವ ಕ್ರಮ: activity.google.com ಲಾಗ್ ಇನ್ ಮಾಡಿ, ವೆಬ್ ಮತ್ತು ಅಪ್ಲಿಕೇಶನ್ ಚಟುವಟಿಕೆ ಟ್ಯಾಬ್ಗೆ ಹೋಗಿ. Manage My Activity verification ಬಟನ್ ಟ್ಯಾಪ್ ಮಾಡಿ.
require extra verification ಆಯ್ಕೆಮಾಡಿ ಮತ್ತು ನಿಮ್ಮ ಖಾತೆಯ ಹಿಸ್ಟರಿ ಮೂಲಕ ಬ್ರೌಸ್ ಮಾಡಲು ಅನುಮತಿಸುವ ಮೊದಲು ನಿಮ್ಮ ಖಾತೆಯ ಪಾಸ್ವರ್ಡ್ ಹಾಕುವಂತೆ ಗೂಗಲ್ ನಿಮ್ಮನ್ನು ಕೇಳುತ್ತದೆ.
ನಿಮ್ಮ ಗೂಗಲ್ ಸರ್ಚ್ ಹಿಸ್ಟರಿ ಲೀಕ್ ಆಗುವ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರೆ, ನಿಮ್ಮ ಚಟುವಟಿಕೆಯ ಹಿಸ್ಟರಿಯನ್ನು ಹಸ್ತಚಾಲಿತವಾಗಿ ಅಳಿಸುವುದನ್ನು ಪರಿಗಣಿಸಲು ನೀವು ಬಯಸ ಬಹುದು, ಅಥವಾ ನಿಮಗಾಗಿ ನಿಮ್ಮ ಡಿಜಿಟಲ್ ಹಿಸ್ಟರಿಸ್ ಆಟೊಮ್ಯಾಟಿಕ್ ಆಗಿ ಡಿಲೀಟ್ ಮಾಡುವ ಪೂರ್ವ ನಿಗದಿತ  ಸೆಟ್ಟಿಂಗ್ ಆಯ್ಕೆ ಮಾಡಬಹುದು. 
ಗೂಗಲ್ ಸರ್ಚ್ ಹಿಸ್ಟರಿ ಆಟೋ ಡಿಲೀಟ್ ಮಾಡಲು ಹೀಗೆ ಮಾಡಿ: 
ಸ್ಟೆಪ್ 1- ನಿಮ್ಮ Google ಖಾತೆಗೆ ಲಾಗ್ ಇನ್ ಮಾಡಿ ಮತ್ತು ‘Data & Personalization’ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ. 
ಸ್ಟೆಪ್ 2- ಆ ನಂತರ ಕೆಳಗೆ ಸ್ಕ್ರಾಲ್ ಮಾಡಿ Activity Controls ವಿಭಾಗವನ್ನು ಕಾಣುತ್ತಿರಿ. ಇಲ್ಲಿ ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವೀಟಿ, ಲೊಕೇಶನ ಹಿಸ್ಟರಿ, ಮತ್ತು ಯೂಟ್ಯೂಬ್ ಹಿಸ್ಟರಿ ಎಂಬ ಮೂರು ವಿಭಾಗಗಳನ್ನು ಹೊಂದಿದೆ. 
ಸ್ಟೆಪ್ 3- ತದ ನಂತರ ಅಲ್ಲಿ ಕಾಣುವ ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವೀಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ. 
ಸ್ಟೆಪ್ 4: ‘ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವೀಟಿ’ ವಿಭಾಗದ ಮೇಲೆ ಕ್ಲಿಕ್ ಮಾಡಿ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು Auto-Delete ಆಯ್ಕೆಯನ್ನು ಕ್ಲಿಕ್ ಮಾಡಿ. 
ಸ್ಟೆಪ್ 5: ಆಗ ನಿಮಗೆ ಡೇಟಾವನ್ನು ಯಾವಾಗ ಸ್ವಯಂ ಡಿಲೀಟ್ ಮಾಡಬೇಕು ಎಂಬು ಆಯ್ಕೆ ಪಟ್ಟಿ ಕಾಣಿಸುತ್ತದೆ. 3 ತಿಂಗಳ ಅಥವಾ 18 ತಿಂಗಳ ಆಯ್ಕೆ ಕಾಣಿಸುತ್ತವೆ. ನಿಮಗೆ ಬೇಕಾದ ಒಂದು ಆಯ್ಕೆ ಸೆಲೆಕ್ಟ್ ಮಾಡಿ ನೆಕ್ಸ್ಟ್ ಬಟನ್ ಒತ್ತಿರಿ.
ಸ್ಟೆಪ್ 6: ಇದೇ ರೀತಿ ನೀವು ಲೊಕೇಶನ್ ಹಿಸ್ಟರಿ ಮತ್ತು ಯೂಟ್ಯೂಬ್ ಹಿಸ್ಟರಿಗಳನ್ನು ಆಟೋ ಡಿಲೀಟ್ ಮಾಡಲು ಸೆಟ್ಟಿಂಗ್ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
 
 
 
 
 
 
 
 
 
 
 

Leave a Reply